ಹತ್ತಿಗೆ ಕುಷ್ಟಗಿ ಮಾರುಕಟ್ಟೆ ಉತ್ತಮವಾಗಿದೆ ಈ ಬಾರಿ ಮಳೆಯಿಂದ ಸಾಕಷ್ಟು ಹಾನಿಗೊಳಗಾದರೂ ಅಲ್ಪಸ್ವಲ್ಪ ಇಳುವರಿ ಬಂದಿದೆ. ದರ ವಿಷಯದಲ್ಲೂ ವ್ಯಾಪಾರಸ್ಥರಿಂದ ರೈತರಿಗೆ ತೊಂದರೆಯಾಗಿಲ್ಲ.
ಹನುಮಪ್ಪ ಹಿರೇತಳವಾರ ಗುಡಿಕಲಕೇರಿ ರೈತ
ರೈತರಿಗೆ ಹತ್ತಾರು ತೊಂದರೆ ಕಷ್ಟಪಟ್ಟು ಬೆಳೆದು ಮಾರಲು ತಂದರೆ ಎಪಿಎಂಸಿಯಲ್ಲಿಯೂ ಸಮಸ್ಯೆ. ಒಟ್ಟಿನ ಮ್ಯಾಲೆ ರೈತರ ತೊಂದ್ರಿ ಬಗಿಹರಸೋರು ಯಾರಿಲ್ಲ ನೋಡ್ರಿ.
ಫಕೀರಗೌಡ ಈಳಗೇರ ಕೋಳಿಹಾಳ ರೈತ
ಹತ್ತಿ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಪ್ರಾಂಗಣದಲ್ಲಿನ ಜಾಗ ಕಡಿಮೆ ಇದೆ ಆದರೂ ಸೂಕ್ತಕಡೆ ಸ್ಥಳಾವಕಾಶ ಕಲ್ಪಿಸಲು ಪ್ರಯತ್ನಿಸುತ್ತೇವೆ.
ಸುರೇಶ ತಂಗನೂರು ಎಪಿಎಂಸಿ ಕಾರ್ಯದರ್ಶಿ
ನಾಲ್ಕು ವರ್ಷಗಳ ಹಿಂದೆ ಕ್ವಿಂಟಲ್‌ಗೆ ₹11 ಸಾವಿರ ಬೆಲೆ ಇತ್ತು ಈಗ ಆರೇಳು ಸಾವಿರ ರೂಪಾಯಿಗೆ ಬಂದಿದೆ. ಅಷ್ಟೇ ಅಲ್ಲ ಮೊದಲು ಹೆಚ್ಚಿನ ಬೆಲೆ ಕೊಡುವುದಾಗಿ ಹೇಳುವ ವರ್ತಕರು ತಂದ ನಂತರ ನೆಪ ಹೇಳಿ ಕಡಿಮೆ ಬೆಲೆಗೆ ಕೇಳುತ್ತಾರೆ