ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಸಾಣಾಪುರ ಗ್ರಾಮದ ಬಳಿ ತುಂಗಾಭದ್ರಾ ನದಿಯಲ್ಲಿ ಈಜಲು ಹಾರಿ ಮುಳುಗಿ ಮೃತಪಟ್ಟ ಹೈದರಾಬಾದ್ನ ಖಾಸಗಿ ಆಸ್ಪತ್ರೆಯ ವೈದ್ಯೆ ಅನನ್ಯರಾವ್ (26) ಮೃತದೇಹ ಗುರುವಾರ ಪತ್ತೆಯಾಗಿದೆ.

ಅಗ್ನಿಶಾಮಕ, ಪೊಲೀಸ್ ಇಲಾಖೆ, ಜೆಎಸ್ಡಬ್ಲ್ಯು ಸುರಕ್ಷಿತ ತಂಡ ಹಾಗೂ ಸ್ಥಳೀಯವಾಗಿ ತೆಪ್ಪ ಹಾಕುವ ಯುವಕರ ನಿರಂತರ ಕಾರ್ಯಾಚರಣೆಯಿಂದ ಘಟನೆ ನಡೆದ ಒಂದು ದಿನದ ಬಳಿಕ ಮೃತದೇಹ ಸಿಕ್ಕಿದೆ.

ಹೈದರಾಬಾದ್ ಸಮೀಪದ ನಾಂಪಲ್ಲಿಯ ಅನನ್ಯರಾವ್ ರಜೆಯ ದಿನಗಳನ್ನು ಕಳೆಯಲು ಸ್ನೇಹಿತರ ಜೊತೆ ಇಲ್ಲಿಗೆ ಬಂದು ಸಾಣಾಪುರ ಗ್ರಾಮದ ಗೆಸ್ಟ್ ಹೌಸ್ನಲ್ಲಿ ತಂಗಿದ್ದರು. ಬುಧವಾರ ಬೆಳಿಗ್ಗೆ ಗೆಸ್ಟ್ ಹೌಸ್ ಹಿಂಭಾಗದಲ್ಲಿರುವ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದಾಗ ಈ ಅವಘಡ ನಡೆದಿತ್ತು. ಅನನ್ಯರಾವ್ ತೆಲಂಗಾಣದ ರಾಜಕೀಯ ನಾಯಕರೊಬ್ಬರ ಪುತ್ರಿಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಮಾಡಿಸಿ ಕಾರ್ಯಾಚರಣೆ ನಡೆಸಿದ್ದರಿಂದ ಮೃತದೇಹ ಕೊರಕಲು ಕಲ್ಲುಬಂಡೆಗಳ ನಡುವೆ ಪತ್ತೆಯಾಗಿದೆ. ಸ್ಥಳೀಯರ ನೆರವಿನಿಂದ ಮೃತದೇಹ ಹೈದರಾಬಾದ್ಗೆ ತೆಗೆದುಕೊಂಡು ಹೋಗಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.