ಕಾರಟಗಿ: ಪಟ್ಟಣದಲ್ಲಿನ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಿರಿದಾದ ರಸ್ತೆಯಲ್ಲಿ ಎಲ್ಲೆಂದರೆಲ್ಲಿ ವಾಹನಗಳ ನಿಲುಗಡೆ ಹಾಗೂ ಸಂಚಾರದಿಂದ ಸರಣಿ ಅಪಘಾತಗಳು ನಿರಂತರವಾಗಿ ಜರುಗುತ್ತಿವೆ. ಹಾಗಾಗಿ ರಸ್ತೆ ವಿಸ್ತರಣೆ ಮಾಡಬೇಕು. ಜನರ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಜಾಗೃತ ಯುವಕ ಸಂಘ ಹಾಗೂ ನಾಗರಿಕರು ಪುರಸಭೆ ಹಾಗೂ ಪೊಲೀಸ್ ಇಲಾಖೆಗೆ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ರಾಯಚೂರು-ಗಂಗಾವತಿ ಮುಖ್ಯರಸ್ತೆಯ ವಿಸ್ತರಣೆ ಮಾಡುವ ಜತೆಗೆ ವಾಹನ ನಿಲುಗಡೆಗೆ ಸೂಕ್ತ ಸ್ಥಳ ನಿಗದಿಪಡಿಸಬೇಕು. ಕರ್ಕಶ ಶಬ್ದದೊಂದಿಗೆ ಓಡಾಡುವ ಬೈಕ್ ಸವಾರರಿಗೆ ದಂಡ ವಿಧಿಸಬೇಕು. ಸಂಚಾರ ನಿಯಂತ್ರಣಕ್ಕೆ ಸಿಬ್ಬಂದಿ ನಿಯೋಜಿಸಬೇಕು. ಸಂಚಾರ ಪೊಲೀಸ್ ಠಾಣೆ ಆರಂಭಕ್ಕೆ ಪ್ರಸ್ತಾವ ಸಲ್ಲಿಸಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ಪಟ್ಟಣದ ಪುರಸಭೆ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಪ್ರಹ್ಲಾದ ಜೋಷಿ, ತಾಯಪ್ಪ, ಉಪಾಧ್ಯಕ್ಷ ಅಯ್ಯಪ್ಪ ಉಪ್ಪಾರ ಸದಸ್ಯ ಶರಣಪ್ಪ ಕುಂಬಾರ, ದಲಾಲಿ ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಪಗಡದಿನ್ನಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣ ಈಡಿಗೇರ ಯುವ ಮುಖಂಡ ಪ್ರಭುರಾಜ ಬೂದಿ, ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೇಹೊಸೂರ, ಮುಖ್ಯಾಧಿಕಾರಿ ಸುರೇಶ ಹಾಗೂ ಪಿಎಸ್ಐ ಕಾಮಣ್ಣ ನಾಯ್ಕ ಮಾತನಾಡಿದರು.

ತಾಲ್ಲೂಕ ಕೇಂದ್ರ ಘೋಷಣೆಯಾಗಿದೆ. ಕಚೇರಿ ಹಾಗೂ ಸೌಕರ್ಯಗಳು ಮರೀಚಿಕೆಯಾಗಿವೆ. ಹುಬ್ಬಳ್ಳಿ- ಹೈದರಾಬಾದ ನಗರಗಳಿಗೆ ಸಂಪರ್ಕ ಸಾಧಿಸುವ ರಾಜ್ಯ ಹೆದ್ದಾರಿಯೂ ಪಟ್ಟಣದಲ್ಲಿಯೇ ಹಾಯ್ದು ಹೋಗಿರುವ ಕಾರಣಕ್ಕೆ ನಿತ್ಯವೂ ನೂರಾರು ಬಸ್, ಕಾರು, ಬೃಹತ್ ಗಾತ್ರದ ವಾಹನಗಳು ಸಂಚರಿಸುತ್ತವೆ. ಕಿಷ್ಕಿಂದೆಯಂಥಹ ರಸ್ತೆಯಿಂದ ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇದನ್ನು ಮನಗಂಡು ಪುರಸಭೆ ಹಾಗೂ ಪೊಲೀಸ್ ಇಲಾಖೆಯು ಸಂಬಂಧಪಟ್ಟ ಇಲಾಖೆ ಕ್ರಮಕ್ಕೆ ಮುಂದಾಗಬೇಕು.

ಎಲ್ಲೆಂದರಲ್ಲಿ ನಿಲ್ಲಿಸುವ ಎಲ್ಲಾ ವಾಹನಗಳಿಗೆ ಕನಕದಾಸ ವೃತ್ತದ ಹಳೇ ನಾಡ ಕಚೇರಿಯ ಆವರಣ ಮತ್ತು ಹಳೆಯ ಬಸ್ ನಿಲ್ದಾಣದ ಬಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣಗೋಡೆ ಮುಂಭಾಗದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಜನನಿಬಿಡ ಸ್ಥಳ, ಶಾಲೆ, ಕಾಲೇಜುಗಳ ಹತ್ತಿರ ರಸ್ತೆಉಬ್ಬು ಹಾಕಬೇಕು. ಕರ್ಕಶ ಶಬ್ದದೊಂದಿಗೆ ಭಾರಿ ವೇಗವಾಗಿ ಓಡಾಡುವ ಬೈಕ್ ಸಂಚಾರದ ಮೇಲೆ ನಿಷೇಧ ಹಾಕಬೇಕು. ಪಟ್ಟಣದ ಆರಂಭದಿಂದ ಮುಕ್ತಾಯದವರೆಗೆ ವಾಹನಗಳಿಗೆ ವೇಗದ ಮಿತಿ ಅಳವಡಿಸಬೇಕು. ಕನಕದಾಸ ವೃತ್ತ, ಹಳೇ ಬಸ್ ನಿಲ್ದಾಣ, ಎಪಿಎಂಸಿ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಮನವಿಯಲ್ಲಿ ಸಂಘವು ಒತ್ತಾಯಿಸಿದೆ.

ಮನವಿ ಸ್ವೀಕರಿಸಿದ ಅಧಿಕಾರಿಗಳು, ಅಗತ್ಯ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.

ಪುರಸಭೆ ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸದಸ್ಯರಾದ ಹಿರೇಬಸಪ್ಪ ಸಜ್ಜನ್, ರಾಜಶೇಖರ ಸಿರಿಗೇರಿ, ಸೋಮಶೇಖರ ಬೇರಿಗೆ, ಬಸವರಾಜ ಕೊಪ್ಪದ, ಆನಂದ ಮ್ಯಾಗಳಮನಿ, ಪಕೀರಪ್ಪ ನಾಯಕ, ಸುರೇಶ, ವೀರೇಶ ಗದ್ದಿ ಮುದುಗಲ್, ನಾಗರಾಜ್ ಈಡಿಗೇರ, ಪುರಸಭೆ ಎಂಜಿನಿಯರ್ ಮಂಜುನಾಥ ಉಪಸ್ಥಿತರಿದ್ದರು.

ಜಾಗೃತ ಯುವಕ ಸಂಘದ ಗೌರವಾಧ್ಯಕ್ಷ ಶರಣಪ್ಪ ಕೋಟ್ಯಾಳ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಕಾಯಿಗಡ್ಡಿ ಪದಾಧಿಕಾರಿಗಳಾದ ರುದ್ರೇಶ ಮಂಗಳೂರು, ಯಮನಪ್ಪ ಮೂಲಿಮನಿ, ಅನೀಲ್ ಪಾಟೀಲ್, ಹುಚ್ಚಪ್ಪ ಕುರಿ, ಶರಣಯ್ಯಸ್ವಾಮಿ ಖಾನಾವಳಿ, ಅಮರೇಶಗೌಡ ಮಾನ್ವಿ, ವೀರನಗೌಡ ಮಾಲಿಪಾಟೀಲ್, ಶಂಕ್ರಪ್ಪ ಸುರಪುರ, ರಮೇಶ ಕೋಟ್ಯಾಳ, ಸಿದ್ದು ವಳಕಲದಿನ್ನಿ, ಶರಣು ನಗಾರಿ, ಆನಂದ ಕುಲಕರ್ಣಿ, ಎಚ್.ಮಂಜುನಾಥಗೌಡ, ಬಸವರಾಜ ಬಿಜಕಲ್, ಆನಂದ ಹೊಳಗುಂದಿ, ಶರಣಪ್ಪ ಬೆನಕನಾಳ, ಮಹಿಬೂಬ ಹಂಚಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.