ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ವಿರೂಪಾಪುರಗಡ್ಡೆ ಗ್ರಾಮದಲ್ಲಿ ಶನಿವಾರ ರಾತ್ರಿ ಹುಚ್ಚುನಾಯಿ ಕಡಿದ ಪರಿಣಾಮ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅವರಲ್ಲಿ ಇಬ್ಬರನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿರೂಪಾಪುರಗಡ್ಡೆ (ಬಿಂಚಿಕುಟ್ರಿ) ಗ್ರಾಮದ ಎಂಟು ವರ್ಷದ ನಿಹಾರಿಕ ನಾಗೇಶನಾಯ್ಕ, 36 ವರ್ಷದ ಶೇಷಾದ್ರಿ ಬಾಲಚಂದ್ರ ಹಾಗೂ 30 ವರ್ಷದ ಅನುಷಾ (ಹನುಮಂತಿ) (30) ಗಾಯಗೊಂಡವರು.
ಶನಿವಾರ ನಿಹಾರಿಕ ಮನೆಯಿಂದ ಹೊರಬಂದಿದ್ದು, ಈ ವೇಳೆ ಹುಚ್ಚುನಾಯಿ ಏಕಾಏಕಿ ದಾಳಿ ನಡೆಸಿದ್ದು, ಹಣೆ, ಮೂಗು, ಕಣ್ಣಿನ ಭಾಗಕ್ಕೆ ತೀವ್ರವಾಗಿ ಗಾಯಗಳಾಗಿವೆ.
ಬಾಲಕಿ ಮೇಲೆ ನಾಯಿ ದಾಳಿ ನಡೆಸಿದ ವಿಷಯ ತಿಳಿದು ಮನೆಯಿಂದ ಹೊರಬಂದ ಶೇಷಾದ್ರಿ ಹಾಗೂ ಅನುಷಾ ಎಂಬುವವರ ಮೇಲೂ ದಾಳಿ ಮಾಡಿದೆ.
ತೀವ್ರವಾಗಿ ಗಾಯಗೊಂಡಿರುವ ನಿಹಾರಿಕಾಗೆ ಬಳ್ಳಾರಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.