ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾವರಗೇರಾ: ವಿದ್ಯುತ್ ತಂತಿ ತಗುಲಿ ರೈತ ಸಾವು

Published 16 ಜೂನ್ 2024, 15:48 IST
Last Updated 16 ಜೂನ್ 2024, 15:48 IST
ಅಕ್ಷರ ಗಾತ್ರ

ತಾವರಗೇರಾ: ಸಮೀಪದ ಚಿಕ್ಕ ತೆಮ್ಮಿನಾಳ ಗ್ರಾಮದಲ್ಲಿ ಭಾನುವಾರ ಆಕಸ್ಮಿಕ ವಿದ್ಯುತ್ ತಂತಿ ತಗುಲಿ ರೈತ ಬಸವರಾಜ ಸಾಸಲಮರಿ, ಒಂದು ಎತ್ತು ಮೃತಪಟ್ಟಿರುವ ಘಟನೆ ನಡೆದಿದೆ.

ಹೊಲದ ಕೆಲಸಕ್ಕೆ ಹೋಗಿದ್ದ ರೈತ ಜಮೀನು ಕೆಲಸ ಮಾಡುತ್ತಿರುವ ವೇಳೆ ಆಕಸ್ಮಿಕ ತಂತಿ ತಗುಲಿದ್ದು, ರೈತ ಹಾಗೂ ಎತ್ತು ಮೃತಪಟ್ಟಿದೆ.

ಸ್ಥಳಕ್ಕೆ ಜೆಸ್ಕಾಂ ಅಧಿಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿದರು. ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕರ ಭೇಟಿ: ಚಿಕ್ಕ ತೆಮ್ಮಿನಾಳ ಗ್ರಾಮದಲ್ಲಿ ನಡೆದ ವಿಷಯ ತಿಳಿದ ಶಾಸಕ ದೊಡ್ಡನಗೌಡ ಪಾಟೀಲ್ ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT