ಕೊಪ್ಪಳದಲ್ಲಿ ಬುಧವಾರ ಯೂರಿಯಾ ರಸಗೊಬ್ಬರದ ಚೀಟಿಗಾಗಿ ದುಂಬಾಲು ಬಿದ್ದಿದ್ದ ರೈತರು –ಪ್ರಜಾವಾಣಿ ಚಿತ್ರ
ರಸಗೊಬ್ಬರ ಸಿಗದೆ ಎಂಟು ದಿನಗಳಾದವು. ಬೆಳಿಗ್ಗೆ ನಾಲ್ಕು ಗಂಟೆಗೆ ಬಂದು ಸರತಿಯಯಲ್ಲಿ ನಿಂತಿದ್ದೆ. ಮೆಕ್ಕೆಜೋಳ ಬೆಳೆದಿದ್ದೇನೆ. ಗೊಬ್ಬರದ ಅಗತ್ಯವಿದೆ
ರಾಮನಗೌಡ ಚಿಲವಾಡಿಗೆ, ಗ್ರಾಮದ ರೈತ
ಮೂರು ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದೇನೆ. ನಮ್ಮೂರಿನ ಸೊಸೈಟಿಯಲ್ಲಿ ಗೊಬ್ಬರ ಸಿಗದ ಕಾರಣ ಕೊಪ್ಪಳಕ್ಕೆ ಬಂದಿದ್ದೇನೆ. ನಮ್ಮೂರಿನಲ್ಲಿಯೇ ಸಿಕ್ಕರೆ ಇಲ್ಲಿಗೆ ಯಾಕೆ ಬರುತ್ತಿದ್ದೆ
ಯಂಕಪ್ಪ ಇರಕಲ್ಲಗಡ, ಗ್ರಾಮದ ರೈತ
ಕೊಪ್ಪಳ ಹೊರತುಪಡಿಸಿ ಜಿಲ್ಲೆಯ ಬೇರೆ ಎಲ್ಲಿಯೂ ಸಮಸ್ಯೆಯಿಲ್ಲ. ಜಿಲ್ಲೆಗೆ ನಿಗದಿಯಾದಷ್ಟು ಗೊಬ್ಬರ ಬಂದಿದೆ. ಸೆಪ್ಟೆಂಬರ್‌ನಲ್ಲಿ ಪಡೆಯಬೇಕಾದ ಗೊಬ್ಬರ ಈಗಲೇ ಬೇಕು ಎನ್ನುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ
ರುದ್ರೇಶಪ್ಪ ಟಿ.ಎಸ್. ಕೃಷಿ ಇಲಾಖೆ ಜಂಟಿ ನಿರ್ದೇಶಕ
ಅಧಿಕಾರಿಗಳ ಕಣ್ಗಾವಲಿನಲ್ಲಿ ಗೊಬ್ಬರ ವಿತರಣೆ
ರಸಗೊಬ್ಬರಕ್ಕಾಗಿ ರೈತರು ಗಲಾಟೆ ಮಾಡುತ್ತಿದ್ದರಿಂದ ಸ್ಥಳಕ್ಕೆ ಬಂದ ಜಿಲ್ಲೆಯ ಅಧಿಕಾರಿಗಳು ತಮ್ಮ ಕಣ್ಗಾವಲಿನಲ್ಲಿಯೇ ರೈತರಿಗೆ ಗೊಬ್ಬರದ ಚೀಟಿ ಕೊಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ಧಿ ಹೆಚ್ಚುವರಿ ಎಸ್.ಪಿ.ಹೇಮಂತಕುಮಾರ್ ಸೈಬರ್ ಕ್ರೈಂ ಡಿವೈಎಸ್‌ಪಿ ಯಶವಂತ ಕುಮಾರ್ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಕೊಪ್ಪಳ ತಹಶೀಲ್ದಾರ್ ವಿಠ್ಠಲ ಚೌಗುಲಾ ಸೇರಿದಂತೆ ಅನೇಕರು ರೈತರನ್ನು ಸಮಾಧಾನಪಡಿಸಿದರು.