ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಜಾನಪದ, ತತ್ವಪದ ಸಂಗೀತ ಸಂಭ್ರಮ

Last Updated 5 ಜನವರಿ 2022, 12:43 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ನಾಗೇಶನಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಮತ್ತು ಪ್ರೊ.ಬಿ.ಕೃಷ್ಣಪ್ಪ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಾಂಸ್ಕೃತಿಕ ಸಂಸ್ಥೆ ಮದಲಗಟ್ಟಿ ಸಂಯೋಗದಲ್ಲಿ ಜಾನಪದ ಹಾಗೂ ತತ್ವಪದ ಸಂಗೀತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ರಮೇಶ ಹೊಸಕೋಟಿ ಅವರು, ಮೂಲ ಜನಪದ, ತತ್ವಪದ ಹಾಗೂ ಕನ್ನಡ ಸಾಹಿತ್ಯಕ ವಿಚಾರಗಳ ಕುರಿತು ಹಾಗೂ ಅವುಗಳ ಪ್ರಚಲಿತ ಸ್ಥಾನಮಾನ, ಅವುಗಳ ಉಳಿವಿಗೆ ಮಾಡಬೇಕಾದ ಕಾರ್ಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಇದಷ್ಟೇ ಅಲ್ಲದೇ ಗ್ರಾಮಿಣ ಭಾಗದಲ್ಲಿ ಇಂತಹ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ರಾಮಲಿಂಗಪ್ಪ ಕುಕನೂರು ಇವರ ಪಾತ್ರ ಬಹು ಮುಖ್ಯ, ಇಂತಹ ಕಲಾವಿದರನ್ನು ಗುರುತಿಸಿ ಅವರ ಕಾರ್ಯ ವೈಖರಿಯನ್ನು ಗುರುತಿಸುವುದು ಅತಿ ಅವಶ್ಯಕವಾಗಿದೆ ಎಂದರು.

ನಂತರ ರಾಮಲಿಂಗಪ್ಪ ಕುಕನೂರು ಮಾತನಾಡಿ, ತತ್ವಪದಗಳು, ವಚನಗಳು ಇವುಗಳು ಅನುಭವದ ನುಡಿಗಳು ಇವುಗಳಿಂದ ಸಮಾಜದಲ್ಲಿ ಅನೇಕ ಬದಲಾವಣೆ ಆಗಿರುವುದನ್ನು ಕಾಣಬಹುದು. ಹಿರಿಯರ ಹಾದಿಯಲ್ಲಿ ಸಾಗುವುದು ನಮ್ಮ ಧರ್ಮ, ಆಧುನಿಕ ಗೀತೆಗಳ ರಚನೆಯಲ್ಲಿ ಸಿಲುಕಿ ಇವುಗಳು ಕಾಣದಂತೆ ಮಾಯವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ತತ್ವಪದಗಳ ಗಾಯನ, ವಚನಪದಗಳ ಗಾಯನ ಹಾಗೂ ಮೂಲ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

ನಾರಾಯಣಪ್ಪ ಬಕ್ಸದ್ˌ ಲಕ್ಷ್ಮಣ ಹೊಸಕೋಟಿˌ ಈರಪ್ಪ ಬಡಿಗೇರ್ˌ ಮಾದಿನಾಳಪ್ಪ, ಹುಲಗಪ್ಪ ಶಾಹಪುರ ಹಾಗೂ ಕಲಾಭಿಮಾನಿಗಳು ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT