ಕಾರಟಗಿ: ದುಬಾರಿ ವೈದ್ಯಕೀಯ ವೆಚ್ಚ, ಕೆಲ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳೇ ಆಧಾರವಾಗಿದ್ದು ಬಡವರಿಗೆ ಕೈಗಟುಕದ ಸ್ಥಿತಿಯಲ್ಲಿವೆ. ಇಂತಹ ಸಂದರ್ಭಗಳಲ್ಲಿ ವಿವಿಧ ಸಂಸ್ಥೆಗಳು ನಡೆಸುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಬಡ ಜನರ ಪಾಲಿಗೆ ವರದಾನವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆ, ಮಾರುತಿ ಕಣ್ಣಿನ ಆಸ್ಪತ್ರೆ, ಇನ್ಸಿಟಿಟ್ಯೂಶನ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್, ಗಂಗಾವತಿಯ ಪಾರ್ವತಮ್ಮ ಚಾರಿಟಬಲ್ ಟ್ರಸ್ಟ್, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಮತ್ತು ಯುವ ಬ್ಲಾಕ್ ಕಾಂಗ್ರೆಸ್ ಘಟಕದ ಸಹಯೋಗದಲ್ಲಿ ಬುಧವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವ ಜನಾಂಗ ತಮ್ಮ ಸದೃಢವಾದ ಆರೋಗ್ಯ ಕಾಪಾಡುವ ಜತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹೆಚ್ಚಾಗಿ ಆಯೋಜಿಸಿ, ಸರ್ಕಾರದೊಂದಿಗೆ ಕೈಜೋಡಿಸಬೇಕು. ಜನರ ಮನೆ ಬಾಗಿಲಿಗೆ ಯೂತ್ ಕಾಂಗ್ರೆಸ್ ಪದಾಧಿಕಾರಿಗಳು ಉಚಿತ ಆರೋಗ್ಯ ಸೇವೆ ನೀಡುತ್ತಿರುವುದು ಶ್ಲಾಘನಾರ್ಹ. ನುರಿತ ವೈದ್ಯರ ತಂಡ ಜನರಿರುವ ಸ್ಥಳಗಳಲ್ಲಿಯೇ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡಿ, ಜನರ ಆರೋಗ್ಯ ಸದೃಢಗೊಳಿಸುತ್ತಿರುವುದು ಪ್ರಸಂಶನಾರ್ಹ. ಪಟ್ಟಣ, ಗ್ರಾಮೀಣ ಭಾಗದ ಜನರು ಆರೋಗ್ಯ ಶಿಬಿರಗಳ ಪ್ರಯೋಜನೆ ಪಡೆಯಲು ಮುಂದಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಅಗ್ನಿಗುಂಡ ದ್ಯಾವಮ್ಮ ದೇವಿ ಆರಾಧಕ ಭೀಮಪ್ಪಜ್ಜ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಲು ಸದೃಢ ಆರೋಗ್ಯ ಬಹಳ ಮುಖ್ಯ. ದೇಹವು ರೋಗಗಳ ನೆಲೆಯಾಗದಂತೆ ಎಚ್ಚರ ವಹಿಸಬೇಕು. ದುಶ್ಚಟಗಳಿಂದ ದೂರವಿರಬೇಕು. ಸದಾ ಸಕಾರಾತ್ಮಕ ಚಿಂತನೆ ಮಾಡಬೇಕು. ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪಿಆರ್ಒ ಡಾ.ಮಲ್ಲಿಕಾರ್ಜುನ ಹಚ್ಚೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

91 ಜನರಿಗೆ ಕಣ್ಣಿಗೆ ಸಂಬಂಧಿಸಿದ, 170ಕ್ಕೂ ಹೆಚ್ಚು ಜನರಿಗೆ ಹೃದಯ, ನರ, ಎಲುಬು, ಕೀಲುಗಳ ಸಮಸ್ಯೆ, ಕ್ಯಾನ್ಸರ್, ಸ್ಪೈನಲ್ ಕಾರ್ಡ ಚಿಕಿತ್ಸೆ, ಬಿಪಿ ಮಧುಮೇಹಗಳಂತಹ ರೋಗಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಮಾಡಲಾಯಿತು.

ಕಾಂಗ್ರೆಸ್ ಮುಖಂಡರಾದ ಶಿವರೆಡ್ಡಿ ನಾಯಕ, ಚನ್ನಬಸಪ್ಪ ಸುಂಕದ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಯ್ಯಪ್ಪ ಉಪ್ಪಾರ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಅರಳಿ, ಜಿಲ್ಲಾ ಯುವ ಕಾಂಗ್ರೆಸ್ನ ಲಿಂಗೇಶ ಕಲ್ಗುಡಿ, ಎನ್. ಎಸ್. ಯು. ಐ ನಗರ ಘಟಕದ ಅಧ್ಯಕ್ಷ ಶಿವಕುಮಾರ ನಾಯಕ, ಯುವ ಕಾಂಗ್ರೆಸ್ ಕನಕಗಿರಿ ಘಟಕದ ಉಪಾಧ್ಯಕ್ಷ ಕೊಟ್ರೇಶ ಶೀಲವಂತರ, ಯುವ ಕಾಂಗ್ರೆಸ್ ಕಾರಟಗಿ ಬ್ಲಾಕ್ ಅಧ್ಯಕ್ಷ ಸುನೀಲ್ ಮೂಲಿಮನಿ, ಪ್ರಮುಖರಾದ ಶರಣಬಸವಗೌಡ ರಾಮನಗರ, ದುರುಗೇಶ ಸಾಲೋಣಿ, ಶ್ರೀಶೈಲ ಹೊಳಗುಂದಿ, ಶರಣಬಸವ ದಿದ್ದಿಗಿ, ಪುಟ್ಟು, ಮಲ್ಲು, ಶರಣಬಸವ, ಯಶವಂತ್, ಅವಿನಾಶ, ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಅನಂತ್ ಜೂರಟಗಿ, ಸಿಎಚ್ಒಗಳಾದ ಹನುಮಂತಪ್ಪ ಗುರಿಕಾರ್, ಶಿವಲೀಲಾ ಸಿಬ್ಬಂದಿ ಸಾವಿತ್ರಿ, ಸುಮಾ, ಗಾಯತ್ರಿ, ಪರಶುರಾಮ್, ಸುಮಂಗಲಾ, ಯುವ ಕಾಂಗ್ರೆಸ್ನ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.