ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ‘ಗಡಚಿಂತಿ’ಯಲ್ಲಿ ನೀರಿನದ್ದೇ ಬಹಳ ಚಿಂತೆ

ಕುಡಿಯುವ ನೀರಿಗೆ ಅಭಾವ: ಗ್ರಾಮಸ್ಥರ ಆಕ್ರೋಶ
Published 6 ಜೂನ್ 2024, 15:46 IST
Last Updated 6 ಜೂನ್ 2024, 15:46 IST
ಅಕ್ಷರ ಗಾತ್ರ

ಹನುಮಸಾಗರ: ಹಾಬಲಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಚಿಂತಿ ಗ್ರಾಮದಲ್ಲಿ ಮೋಟಾರ್‌ ದುರಸ್ತಿ ಮತ್ತು ವಿದ್ಯುತ್‌ ಪರಿವರ್ತಕ (ಟಿ.ಸಿ) ಸುಟ್ಟು ಹೋಗಿರುವ ಪರಿಣಾಮ ನಾಲ್ಕೈದು ದಿನಗಳಿಂದ ಗ್ರಾಮದಲ್ಲಿ ನೀರಿನ ತೀವ್ರ ಅಭಾವ ಉಂಟಾಗಿ ಗ್ರಾಮಸ್ಥರು ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ.

ಸುಮಾರು 150ಕ್ಕಿಂತ  ಹೆಚ್ಚು ಮನೆಗಳಿರುವ ಈ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಮೋಟಾರ್‌ ದುರಸ್ತಿ ನಡೆದಿದೆ ಎಂದು ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಸಮಜಾಯಿಸಿ ಕೊಡುತ್ತಿದ್ದು, ಈವರೆಗೂ ದುರಸ್ತಿ ಕಾರ್ಯ ಮಾಡಿಲ್ಲ ಹಾಗಾಗಿ ನೀರಿಗೆ ಪರಿತಪಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಇಡೀ ಗ್ರಾಮಕ್ಕೆ ಒಂದೇ ಬೋರ್‌ಲ್ ಇದ್ದು ಅದರ ದುರಸ್ತಿ ಕಾರ್ಯ ನಾಲ್ಕೈದು ದಿನಗಳು ತೆಗೆದುಕೊಳ್ಳಲಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ನೀರು ಬಿಡುವ ಈರಯ್ಯಜ್ಜ ವಾಟರ್ ಮ್ಯಾನ್ ಕೇಳಿದರೆ ಮೋಟಾರು ಕೆಟ್ಟು ನಿಂತಿದ್ದು ಅದರ ದುರಸ್ತಿ ಕಾರ್ಯ ನಡೆಯುತ್ತಿದೆ ಹಾಗೂ ಟ್ರಾನ್ಸ್ಫಮರ್ ರಿಪೇರಿ ಇರುವುದರಿಂದ ನೀರಿನ ಅಭಾವ ತಲೆದೂರಿದೆ ಎಂದು ಈರಯ್ಯಜ್ಜ ಸ್ಥಳೀಯ ವಾಟರ್ ಮ್ಯಾನ್ ಹೇಳುತಿದ್ದಾನೆ.

ನಾಲ್ಕೈದು ದಿನಗಳಿಂದ ನೀರಿನ ಅಭಾವ ತಲೆದೂರಿದ್ದು, ಬಳಸಲು ಬಿಡಿ ಕುಡಿಯಲು ಕೂಡ ನೀರು ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿ ಪಿಡಿಒ ಗಮನಕ್ಕೆ ತಂದರೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.  ಟ್ಯಾಂಕರ್‌ಗಳ ಮೂಲಕವಾದರೂ ಕುಡಿಯಲು ನೀರಿನ ವ್ಯವಸ್ಥೆ ಕೂಡ ಮಾಡಿಲ್ಲ.ಕರೆಯನ್ನು ಸ್ವೀಕರಿಸುವುದಿಲ್ಲ. ಸಮಸ್ಯೆ ಪರಿಹರಿಸದಿದ್ದರೆ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ವಾಲ್ಮೀಕಿ ಯುವಪಡೆಯ ಅಧ್ಯಕ್ಷ ಯಮನೂರಪ್ಪ ಆರ್ ಅಬ್ಬಿಗೇರಿ ಎಚ್ಚರಿಕೆ ನೀಡಿದ್ದಾರೆ.

ನೀರಿಗಾಗಿ ಕಾದು ನಿಂತಿರುವ ಜನರು
ನೀರಿಗಾಗಿ ಕಾದು ನಿಂತಿರುವ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT