ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೌಡ್ರ ಋಣ’ 2 ಮಿಲಿಯನ್‌ ವೀಕ್ಷಣೆ: ಸಂತಸ

Last Updated 26 ಡಿಸೆಂಬರ್ 2019, 11:02 IST
ಅಕ್ಷರ ಗಾತ್ರ

ಕೊಪ್ಪಳ: ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‍ ಅವರ ಕಥೆಯಾಧರಿತ ಮತ್ತು ಅವಿನಾಶ ಚವ್ಹಾಣ ಅವರ ನಿರ್ದೇಶನದಲ್ಲಿ ನಿರ್ಮಾಣಗೊಂಡ ‘ಗೌಡ್ರ ಋಣ’ ಕಿರುಚಿತ್ರ ಯೂಟ್ಯೂಬ್‍ನಲ್ಲಿ ಕೇವಲ 10 ದಿನದಲ್ಲಿ ಸುಮಾರು 2 ಮಿಲಿಯನ್‍ಗೂ ಅಧಿಕ ಜನ ವೀಕ್ಷಿಸಿದ ನಿಮಿತ್ತ ನಗರದ ಪ್ರವಾಸಿ ಮಂದಿರದಲ್ಲಿ ಕೇಕ್ ಕತ್ತರಿಸಿ, ಸಂಭ್ರಮ ಆಚರಿಸಲಾಯಿತು.

ಸಾಹಿತಿ ಪ್ರೊ.ಅಲ್ಲಪ್ರಭು ಬೆಟ್ಟದೂರು ಮಾತನಾಡಿ,‘ಈ ಕಿರುಚಿತ್ರ ಅಸ್ಪೃಶ್ಯತೆ ಆಚರಣೆ ವಿರುದ್ಧ ಮೌನದ ಮೂಲಕ ಪಾತ್ರಧಾರಿಗಳು ಉತ್ತರ ಕೊಟ್ಟಿದ್ದಾರೆ. ಹಳ್ಳಿಯಲ್ಲಿ ನಡೆಯುವ ದಿನನಿತ್ಯದ ಸಹಜ ಕ್ರಿಯೆಗಳಲ್ಲಿ ಹೇಗೆ ಶೋಷಣೆ, ದರ್ಪ ಅಡಗಿದೆ ಎಂಬುದನ್ನು ಈ ಚಿತ್ರ ತೋರುತ್ತದೆ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ರಾಜಶೇಖರ ಅಂಗಡಿ ಮಾತನಾಡಿ,‘ಕೊಪ್ಪಳ ಭಾಗದವರು ಕಿರುಚಿತ್ರ ನಿರ್ಮಾಣ ಕ್ರಿಯೆಯಲ್ಲಿ ಒಲವು ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲಿ ಅನೇಕ ಕಿರುಚಿತ್ರಗಳು ನಿರ್ಮಾಣಗೊಳ್ಳುತ್ತಿರುವುದು ಸಂತಸದ ಸಂಗತಿ’ ಎಂದರು.

ಡಾ.ಸಿದ್ಧಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಚಿತ್ರ ನಿರ್ದೇಶಕ ಅವಿನಾಶ ಚವ್ಹಾಣ ಯೂಟ್ಯೂಬ್‍ನಲ್ಲಿ ಚಿತ್ರ ವೀಕ್ಷಿಸಿದ ಅಂಕಿ-ಸಂಖ್ಯೆಗಳನ್ನು ನೀಡಿದರು.

ಕಲಾವಿದರಾದ ದುರುಗಪ್ಪ, ರೇಣುಕಮ್ಮ, ಹರ್ಷಿತಾ, ಬಾಲನಟ ವೈಭವ್ ಎಸ್.ಅಳವಂಡಿ ಹಾಗೂ ವಚನಾರಾಜ್ ಬಿ. ಕೊಪ್ಪಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT