ಸೋಮವಾರ, ಆಗಸ್ಟ್ 8, 2022
22 °C

ಅಂಗವಿಕಲರಿಗೆ ಆಹಾರ ಧಾನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ನಗರ ಹಾಗೂ ತಾಲ್ಲೂಕಿನ ಹಲವು ಗ್ರಾಮಗಳಲ್ಲಿನ 100 ಕ್ಕೂ ಹೆಚ್ಚು ಅಂಗವಿಕಲರಿಗೆ ಅಜೀಂ ಪ್ರೇಮ್ ಜೀ ಫೌಂಡೇಷನ್ ವತಿಯಿಂದ ಈಚೆಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ಕರ್ನಾಟಕ ರಾಜ್ಯ ಅಂಗವಿಕಲರ ಆರ್.ಪಿ.ಡಿ ಟಾಸ್ಕ್‌ಫೋರ್ಸ್‌ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ಹೊಸಕೇರಾ ಮಾತನಾಡಿ,‘ಕೋವಿಡ್ 2ನೇ ಅಲೆಯಿಂದ ಸಾಕಷ್ಟು ಜನ ಉದ್ಯೋಗವಿಲ್ಲದೆ ಕುಟುಂಬ ನಡೆಸುವುದು ಕಷ್ಟವಾಗಿದೆ. ಇದಕ್ಕೆ ಅಂಗವಿಕಲರಿಗೆ ಕೂಡ ಹೊರತಲ್ಲ. ಇಂಥ ಸಂದರ್ಭದಲ್ಲಿ ಅಜೀಂ ಪ್ರೇಮ್ ಜೀ ಫೌಂಡೇಷನ್‌ನವರು ಆಹಾರ ಧಾನ್ಯದ ಕಿಟ್‌ ಅನ್ನು ವಿತರಿಸಿದ್ದಾರೆ ಅವರಿಗೆ ತುಂಬ ಹೃದಯದ ಧನ್ಯವಾದಗಳು’ ಎಂದು ಅವರು ಹೇಳಿದರು.

ಅಂಗವಿಕಲರ ಸಂಘಟನೆಯ ಸದಸ್ಯರಾದ ರಾಘವೇಂದ್ರ ಸಿದ್ದಿಕೇರಿ, ಅಜೀಜ್, ಮಂಜುನಾಥ, ಸರಸ್ವತಿ, ಉಮೇಶ, ಭುವನೇಶ್ವರಿ ಹಾಗೂ ಶ್ರೀನಿವಾಸ ಕುಲಕರ್ಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು