ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ | ರಸ್ತೆಯಲ್ಲಿ ₹ 100 ನೋಟು, ಭಯಗೊಂಡ ಜನತೆ

Published : 22 ಏಪ್ರಿಲ್ 2020, 11:21 IST
ಫಾಲೋ ಮಾಡಿ
Comments

ಗಂಗಾವತಿ: ಇಲ್ಲಿನ ಜಯನಗರದ ರಸ್ತೆಯಲ್ಲಿ ₹ 100 ಮುಖ ಬೆಲೆಯ ಐದು ನೋಟುಗಳನ್ನು ದುಷ್ಕರ್ಮಿಗಳು ಎಸೆದು ಹೋಗಿದ್ದರಿಂದ ನೋಟುಗಳನ್ನು ಕಂಡ ಜನರು ಆತಂಕ್ಕೆ ಒಳಗಾದ ಘಟನೆ ಮಂಗಳವಾರ ನಡೆಯಿತು.

ನಂತರ ಸ್ಥಳಕ್ಕೆ ನಗರ ಠಾಣಾ ಪೊಲೀಸರು ಆಗಮಿಸಿ, ಸ್ಯಾನಿಟೈಜರ್‌ ಬಳಸಿ ನೋಟುಗಳನ್ನು ಸ್ವಚ್ಛಗೊಳಿಸಿ ವಶಪಡಿಸಿಕೊಂಡರು. ಇದೇ ವೇಳೆ ಪಿಐ ವೆಂಕಟಸ್ವಾಮಿ ಸ್ಥಳೀಯರ ಪಂಚರ ಸಮಕ್ಷಮ ನೋಟುಗಳನ್ನು ಜಪ್ತಿ ಮಾಡಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.

ಕಳೆದ ಎರಡು ದಿನಗಳ ಹಿಂದೆ ಇದೇ ರೀತಿ ನಗರದ ಹೇರೂರು ಓಣಿಯಲ್ಲಿ ₹ 10 ಮೊತ್ತದ 10 ನೋಟುಗಳನ್ನು ಕಂಡು ಬಂದಿದ್ದು, ಪೊಲೀಸರು ಅವುಗಳನ್ನೂ ವಶಪಡಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT