ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ಕಾಲೇಜು ಗುಡ್ಡಗಾಡು ಓಟ: ಬಳ್ಳಾರಿಯ ಕಾವ್ಯ ಪ್ರಥಮ

Published 9 ಡಿಸೆಂಬರ್ 2023, 4:30 IST
Last Updated 9 ಡಿಸೆಂಬರ್ 2023, 4:30 IST
ಅಕ್ಷರ ಗಾತ್ರ

ಕೊಪ್ಪಳ: ಬಳ್ಳಾರಿಯ ಎಎಸ್‌ಎಂ ಕಾಲೇಜಿನ ಕಾವ್ಯ ಎನ್‌. ನಗರದಲ್ಲಿ ಶನಿವಾರ ಬೆಳಗ್ಗೆ ನಡೆದ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ನಡುವಿನ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು.

ಇಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆರಂಭವಾದ ಸ್ಪರ್ಧೆಗೆ ಒಟ್ಟು ಹತ್ತು ಕಿ.ಮೀ. ಗುರಿ ನಿಗದಿ ಮಾಡಲಾಗಿತ್ತು. ಕಾವ್ಯಾ 46 ನಿಮಿಷದಲ್ಲಿ ಗುರಿ ತಲುಪಿ ಮೊದಲಿಗರಾದರು.

ಹುಬ್ಬಳ್ಳಿಯ ಎಸ್‌ಜೆಎಂವಿಎಸ್‌ ಕಾಲೇಜಿಯ ತನಿಷಾ ಇಂದರಗಿ (49 ನಿಮಿಷ), ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಮಿಕಾ (53ನಿ.18ಸೆ.), ಧಾರವಾಡದ ಕೆ.ಎಸ್‌. ಜಗಳೂರು ಕಾಲೇಜಿನ ಅನುಪ್ರಭಾ (53ನಿ. 36ಸೆ.), ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶಿಲ್ಪಾ (55ನಿ, 50ಸೆ.) ಮತ್ತು ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಗೀತಾ (56ನಿ.30ಸೆ.) ಕ್ರಮವಾಗಿ ನಂತರದ ಐದು ಸ್ಥಾನಗಳನ್ನು ಪಡೆದುಕೊಂಡರು.

ರಾಜ್ಯದ ವಿವಿಧೆಡೆಯಿಂದ ಎಂಟು ಕಾಲೇಜುಗಳಿಂದ 36 ಜನ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಇದರಲ್ಲಿ ಮೊದಲ ಆರು ಸ್ಥಾನಗಳನ್ನು ಪಡೆದ ಕ್ರೀಡಾಪಟುಗಳು ಮುಂಬರುವ ಅಂತರ ವಾರ್ಸಿಟಿ ಕ್ರೀಡಾಕೂಟಕ್ಕೆ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿದರು.

ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಮೊದಲ ಆರು ಸ್ಥಾನ ಪಡೆದವರು. ಎಡದಿಂದ; ಕಾವ್ಯ ಎನ್‌., ತನಿಷಾ ಇಂದರಗಿ, ಭೂಮಿಕಾ, ಅನುಪ್ರಭಾ, ಶಿಲ್ಪಾ ಹಾಗೂ ಸಂಗೀತಾ

ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಮೊದಲ ಆರು ಸ್ಥಾನ ಪಡೆದವರು. ಎಡದಿಂದ; ಕಾವ್ಯ ಎನ್‌., ತನಿಷಾ ಇಂದರಗಿ, ಭೂಮಿಕಾ, ಅನುಪ್ರಭಾ, ಶಿಲ್ಪಾ ಹಾಗೂ ಸಂಗೀತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT