ಕೊಪ್ಪಳ: ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ದೊರಕಿಸಿಕೊಡುವುದಾಗಿ ನಂಬಿಸಿ ತಾಲ್ಲೂಕಿನ ಹಿರೇಸಿಂಧೋಗಿ ಗ್ರಾಮದ ಉದ್ಯಮಿ ನರೇಂದ್ರ ಮಾದಿನೂರು ಎಂಬುವವರಿಗೆ ₹33.27 ಲಕ್ಷ ವಂಚನೆ ಮಾಡಿದ ಪ್ರಕರಣ ನಡೆದಿದೆ.

ನರೇಂದ್ರ ಅವರಿಗೆ ಅಪರಿಚಿತರು ವಿವಿಧ ಫೋನ್ ಸಂಖ್ಯೆಗಳ ಮೂಲಕ ಪರಿಚಯ ಮಾಡಿಕೊಂಡು ವ್ಯಾಟ್ಸ್ ಆ್ಯಪ್ ಗ್ರೂಪ್ಗೆ ಸೇರಿಸಿ ಆನ್ಲೈನ್ ಮೂಲಕ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿ ತಾವು ಹೇಳಿದ ಐಪಿಒಗಳಲ್ಲಿ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭಾಂಶ ಸಿಗುತ್ತದೆ ಎಂದು ನಂಬಿಸಿದ್ದಾರೆ. ಟಿಎಲ್ ಎಫ್ಐಎನ್ ಎನ್ನುವ ಹೆಸರಿನ ಆ್ಯಪ್ ವಂಚನೆಗೆ ಒಳಗಾದವರ ಮೊಬೈಲ್ನಲ್ಲಿ ಹಾಕಿಕೊಳ್ಳುವಂತೆ ಹೇಳಿ ಹಣ, ಲಾಭಾಂಶವನ್ನು ಅಪರಿಚಿತರು ತೋರಿಸುತ್ತ ನಿರಂತರವಾಗಿ ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಂಡಿದ್ದಾರೆ.

ಇದನ್ನು ನಿಜವೆಂದು ನಂಬಿದ ನರೇಂದ್ರ ಆ. 4ರಿಂದ 28ರ ತನಕದ ಅವಧಿಯಲ್ಲಿ ಮೇಲಿಂದ ಮೇಲೆ ಅಪರಿಚಿತರ ಖಾತೆಗೆ ಯುಪಿಐ, ಆರ್ಟಿಜಿಎಸ್ ಮೂಲಕ ಹಣ ಹಾಕಿದ್ದಾರೆ. ಇದರಲ್ಲಿ ಲಾಭಾಂಶದ ಹಣವನ್ನು ಕೊಡುವಂತೆ ಕೇಳಿದಾಗ ಅಪರಿಚಿತರು ಕಮಿಷನ್ ಹಣ ಶೇ. 20ರಷ್ಟು ಹಾಕಿದರೆ ಮಾತ್ರ ನೀವು ಕೊಟ್ಟ ಒಟ್ಟು ಹಣವನ್ನು ವಾಪಸ್ ಕೊಡುತ್ತೇವೆ ಎಂದು ಹೇಳಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇಲ್ಲಿನ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.