ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ
ಭಾರತ ಜಗತ್ತಿನಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಒಲಿಂಪಿಕ್ಸ್‌ನಂಥ ವಿಶ್ವದರ್ಜೆಯ ಕ್ರೀಡಾಕೂಟದಲ್ಲಿ ಸಾಧನೆ ಕಡಿಮೆಯಾಗಿದೆ. ಯುವಜನತೆಗೆ ಕ್ರೀಡೆ ಸಾಂಸ್ಕೃತಿಕ ಕ್ಷೇತ್ರದತ್ತ ಸಾಧನೆ ಮಾಡಬೇಕು.
ರಾಘವೇಂದ್ರ ಹಿಟ್ನಾಳ ಶಾಸಕ
ರಾಜ್ಯ ಸರ್ಕಾರ ಯುವಕರು ಮತ್ತು ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ ಯುವ ಜನತೆಯ ಶಕ್ತಿ ಹಾಗೂ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಯುವಜನೋತ್ಸವ ವೇದಿಕೆಯಾಗಿದೆ.
ಅಮ್ಜದ್ ಪಟೇಲ್ ನಗರಸಭೆ ಅಧ್ಯಕ್ಷ
ಕ್ರೀಡಾ ಇಲಾಖೆ ಜೊತೆಯಲ್ಲಿಯೇ ಯುವ ಸಬಲೀಕರಣವೂ ಇದ್ದು ರಾಜ್ಯ ಸರ್ಕಾರ ಯುವಕರ ಸಬಲೀಕರಣಕ್ಕೆ ಒತ್ತು ನೀಡಬೇಕು. ರಾಜ್ಯ ಯುವ ನೀತಿ ಜಾರಿಗೆ ತರಬೇಕು.
ಎಸ್.ಬಾಲಾಜಿ ರಾಜ್ಯ ಯುವ ಸಂಘಗಳ ಒಕ್ಕೂಟ ಅಧ್ಯಕ್ಷ
ಜಿಲ್ಲೆಯಲ್ಲಿ ಉತ್ತಮ ಸಂಪನ್ಮೂಲ ವ್ಯಕ್ತಿಗಳಿದ್ದು ಅವರಿಂದ ಮಾರ್ಗದರ್ಶನ ಪಡೆದು ಯುವಜನತೆ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು. ಅಲ್ಲಿಯೂ ಪ್ರಶಸ್ತಿ ಗೆಲ್ಲಬೇಕು.