ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ | ‘ಛಲ ಅಚಲವಾಗಿದ್ದಾಗ ಸಮಸ್ಯೆ ತಡೆಯಲ್ಲ’

Published 5 ಫೆಬ್ರುವರಿ 2024, 14:55 IST
Last Updated 5 ಫೆಬ್ರುವರಿ 2024, 14:55 IST
ಅಕ್ಷರ ಗಾತ್ರ

ಗಂಗಾವತಿ: ‘ಸಾಧಿಸುವ ಛಲ ಅಚಲವಾಗಿದ್ದಾಗ ಯಾವ ಸಮಸ್ಯೆಯೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ಸಾಧಕನಿಗೆ ನಿರ್ದಿಷ್ಟ ಗುರಿ, ನಿರಂತರ ಪ್ರಯತ್ನ, ತಾಳ್ಮೆ, ಓದುವ ಹವ್ಯಾಸ, ಋಣಾತ್ಮಕ ಚಿಂತನೆ ಇರಬೇಕು’ ಎಂದು ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ ಮಾಳೆ ಹೇಳಿದರು.

ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಎಂಟರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸಮುತ್ಕರ್ಷ ಐಎಎಸ್ ಅಕಾಡೆಮಿ ನೀಡಿದ ಐಎಎಸ್ ಪೂರ್ವ ತಯಾರಿ ಕುರಿತ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪೈಪೋಟಿ ಹೆಚ್ಚಿದ್ದು, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ನೀವು ಎಷ್ಟು ಓದುತ್ತಿರೋ, ವಿದ್ಯೆ ಅಷ್ಟೊಂದು ಎತ್ತರಕ್ಕೆ ನಿಮ್ಮನ್ನು ಒಯ್ಯುತ್ತದೆ. ಯಾರಲ್ಲಿ ಇಚ್ಛಾಶಕ್ತಿ ಇರುತ್ತದೋ ಸಾಧನೆಗೆ ಬಾಗಿಲು ಯಾವಾಗಲೂ ತೆರದಿರುತ್ತದೆ’ ಎಂದರು.

ಕೊಪ್ಪಳ ಗವಿಸಿದ್ದೇಶ್ವರ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಪ್ರೊ.ಶರಣಬಸಪ್ಪ ಬಿಳಿಯಲೆ ಮಾತನಾಡಿ, ‘ಶಿಕ್ಷಣ ಕ್ಷೇತ್ರ ಸಾಕಷ್ಟು ಬದಲಾವಣೆ ಕಂಡಿದ್ದು, ವಿದ್ಯಾರ್ಥಿಗಳು, ಪಾಲಕರು ಶಿಕ್ಷಣ ಕ್ಷೇತ್ರಕ್ಕೆ ತಕ್ಕಂತೆ ವೇಗವಾಗಿ ಓಡಬೇಕು. ಜ್ಞಾನ ಎಲ್ಲ ಕಾಲಕ್ಕೂ ಮುಖ್ಯ ಎಂದರು. ನಂತರ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ರಾಘವೇಂದ್ರ ಸಿರಿಗೇರಿ, ಅನಿಲ್ ಕುಷ್ಟಗಿ, ಬದರಿ ನಾರಾಯಣ ಆದಾಪುರ, ಸಂತೋಷ ಕೆಲೋಜಿ, ಗುಂಡೂರು ಪವನ್ ಕುಮಾರ, ವೀರು ಕೊಟಗಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT