ಹನುಮಸಾಗರ: ಇಲ್ಲಿನ ಜ್ಞಾನೋದಯ ಶಾಲೆಯಲ್ಲಿ ಸೋಮವಾರ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಜ್ಞಾನೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪರಶುರಾಮ ರಜಪೂತ ಮತ್ತು ಶಾಲೆಯ ಸಂಸ್ಥಾಪಕ ವಿಷ್ಣು ರಜಪೂತ ಅವರು ಮಕ್ಕಳಿಗೆ ಕೃಷ್ಣ ಜನ್ಮಾಷ್ಟಮಿಯ ಮಹತ್ವ ವಿವರಿಸಿದರು.
ಪರಶುರಾಮ ರಜಪೂತ ಮಾತನಾಡಿ, ‘ಶ್ರೀಕೃಷ್ಣನ ಜನ್ಮದಿನ ಚಂದ್ರಮಾನದ ಲೆಕ್ಕದಲ್ಲಿ ಶ್ರಾವಣದ ಕೃಷ್ಣ ಅಷ್ಟಮಿಯಂದು ಮತ್ತು ಸೌರಮಾನದ ಲೆಕ್ಕದಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದಂದು ಆಚರಿಸಲಾಗುತ್ತದೆ’ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಮಹೇಶ ನೇತೃತ್ವವಹಿಸಿದ್ದರು. ಗುರುದೇವ ಮತ್ತು ಸಹಕಾರಿಗಳಾದ ರಾಮದಾಸ, ಮಹೇಂದ್ರ, ಶಕುಂತಲಾ, ಪ್ರೇಮ, ಸರೋಜಾ, ಅಂಬಿಕಾ, ಸುಷ್ಮಿತಾ, ಶಂಕ್ರಮ್ಮ, ಯಶೋಧಾ, ಕಾಸಿಂಬಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಕೃಷ್ಣನ ವೇಷಧರಿಸಿದ ಮಕ್ಕಳು, ಭಜನೆ ಮತ್ತು ನೃತ್ಯ ಪ್ರದರ್ಶಿಸಿ ಪ್ರತಿಭೆ ಮೆರೆದರು.