ಕುಷ್ಟಗಿ ತಾಲ್ಲೂಕು ತೆಗ್ಗಿಹಾಳದಲ್ಲಿ ವಿದ್ಯಾರ್ಥಿಗಳು ಬುಧವಾರ ಸಾರಿಗೆ ಬಸ್ ನಿಲ್ಲಿಸಿದ್ದರು
ರಸ್ತೆ ಹದಗೆಟ್ಟಿದ್ದರಿಂದ ವಾರದಿಂದಲೂ ಬಸ್ ಓಡಿಸಿಲ್ಲ. ಮಕ್ಕಳ ಸಮಸ್ಯೆ ನಮಗೂ ಗೊತ್ತಿದ್ದರೂ ನಾವು ಅಸಹಾಯಕರಾಗಿದ್ದೇವೆ. ಈಗಷ್ಟೇ ದುರಸ್ತಿ ಕೆಲಸ ನಡೆದಿದ್ದು ಬಸ್ ಓಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.
–ಸುಂದರಗೌಡ ಪಾಟೀಲ, ಸಾರಿಗೆ ಘಟಕ ವ್ಯವಸ್ಥಾಪಕ
ತೀರಾ ಹದಗೆಟ್ಟಿರುವ ಕುಷ್ಟಗಿ-ಟೆಂಗುಂಟಿ ಮಧ್ಯೆ 4 ಕಿಮೀ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳಲಾಗಿದ್ದು ಮಳೆಗಾಲವಾಗಿರುವುದರಿಂದ ಕೆಲಸಕ್ಕೆ ಅಡ್ಡಿಯಾಗಿದೆ. ತ್ವರಿತ ಕಾಮಗಾರಿಗೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
–ತಾಜುದ್ದೀನ್ ಎಇ, ಲೋಕೋಪಯೋಗಿ ಇಲಾಖೆ
ಈ ರಸ್ತೆ ನಮ್ಮ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಪ್ರತಿವರ್ಷ ನಿರ್ವಹಣೆ ದುರಸ್ತಿ ಹೆಸರಿನಲ್ಲಿ ಲಕ್ಷಾಂತರ ಹಣ ಖರ್ಚಾಗುತ್ತದೆ. ಆದರೆ ಕಳಪೆ ಕಾಮಗಾರಿಯಿಂದ ರಸ್ತೆ ಹಾಳಾಗುತ್ತದೆ. ಬಸ್ ಬಾರದ ಕಾರಣ ಮಕ್ಕಳು ಶಾಲೆಗೆ ಹೋಗುತ್ತಿಲ್ಲ.