ಸ್ಥಳ ಪರಿಶೀಲಿಸದೆ ಸಹಿ; ಆರೋಪ
ಪಾರ್ಕ್ ನಾಗರಿಕ ಸೌಲಭ್ಯದ ಜಾಗ ಹಾಗೂ ಮೂಲ ಸೌಲಭ್ಯ ಒದಗಿಸಿರುವುದನ್ನು ಖಚಿತ ಪಡಿಸಿಕೊಂಡು ವಿನ್ಯಾಸಗಳಿಗೆ ಅನುಮೋದನೆ ನೀಡಬೇಕಾಗಿದ್ದ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕುಳಿತು ಸಹಿ ಮಾಡಿರುವುದರಿಂದ ಸೌಲಭ್ಯಗಳಿಂದ ವಂಚಿತರಾಗಬೇಕಾಗಿದೆ ಎನ್ನುವುದು ಅಲ್ಲಿನ ನಿವಾಸಿಗಳ ದೂರು. ‘ಎನ್‌ಎ ಹಾಗೂ ಪ್ರಾಧಿಕಾರದ ಅನುಮೋದನೆ ಪಡೆದುಕೊಂಡ ನಿವೇಶನಗಳಲ್ಲಿ ಮನೆ ಕಟ್ಟಿಸಿಕೊಳ್ಳುವಾಗ ಕುಡಿಯುವ ನೀರಿನ ಕೊಳವೆ ಇಲ್ಲ. ಕಂಬ ದೀಪ ಇರಲಿಲ್ಲ. ಸಾವಿರಾರು ರೂಪಾಯಿ ವೈಯಕ್ತಿಕವಾಗಿ ವೆಚ್ಚ ಮಾಡಿ ಪೈಪ್‌ಲೈನ್ ಹಾಗೂ ವಿದ್ಯುತ್ ಕಂಬ ಹಾಕಿಸಿಕೊಂಡು ಮನೆ ಕಟ್ಟಿಸಿಕೊಂಡಿದ್ದೇವೆ. ಎರಡು ದಶಕಗಳಾದರೂ ರಸ್ತೆಗಳು ಡಾಂಬರೀಕರಣವಾಗಿಲ್ಲ’ ಎಂದು ಸ್ಥಳೀಯರಾದ ಯಂಕೋಬ ಹನುಮಂತ ಆಕ್ರೋಶ ವ್ಯಕ್ತಪಡಿಸಿದರು.