ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಬಳಕೆಯಿಂದ ಕಲಿಕೆ ಕುಂಠಿತ; ಅರವಿಂದ ಜಮಖಂಡಿ

Last Updated 26 ಡಿಸೆಂಬರ್ 2021, 2:58 IST
ಅಕ್ಷರ ಗಾತ್ರ

ಗಂಗಾವತಿ: ಈಗಿನ ವಿದ್ಯಾರ್ಥಿಗಳು ಮೊಬೈಲ್‌ ಗೀಳಿನಿಂದಾಗಿವಿದ್ಯಾಭ್ಯಾಸದ ಕಡೆ ಹೆಚ್ಚುಗಮನ ಹರಿಸುತ್ತಿಲ್ಲ. ಇದನ್ನು ಪಾಲಕರು ಗಂಭೀರವಾಗಿ ತೆಗೆದು ಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಹೇಳಿದರು.

ನಗರದ ವೆಂಕಟೇಶ್ವರ ಪಿಯು ಕಾಲೇಜಿನಲ್ಲಿ ಗಣಿತಜ್ಞ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮದಿನದ ಪ್ರಯುಕ್ತಈಚೆಗೆ ನಡೆದ ಮಾದರಿ ಗಣಿತ ಪರೀಕ್ಷೆಯ ಉತ್ತೀರ್ಣ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹತ್ತನೆ ತರಗತಿ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನ ವಿಷಯಗಳ ಪರೀಕ್ಷೆ ಗಳಲ್ಲಿ ಹೆಚ್ಚಿನ ಅಂಕ ಗಳಿಸಿದರೆ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದರು.

ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಭಯ ತೊಲಗಿಸಿ, ನಿಗದಿತ ವೇಳೆಯಲ್ಲಿ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬಹುದು ಎಂಬುದನ್ನು ಮನವರಿಕೆ ಮಾಡಿ ಕೊಡಲು ಈ ಮಾದರಿ ಪರೀಕ್ಷೆ ಸಹಾ ಯಕವಾಗುತ್ತದೆ ಎಂದು ತಿಳಿಸಿದರು.

ಕಾಲೇಜು ಅಧ್ಯಕ್ಷ ರವಿ ಚೈತನ್ಯ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಒದಗಿಸಿಕೊಡುವುದು ನಮ್ಮ ಶಿಕ್ಷಣ ಸಂಸ್ಥೆಯ ಕರ್ತವ್ಯ. ಶಿಕ್ಷಣ ಸಂಸ್ಥೆ ಕೇವಲ ಒಬ್ಬ ವ್ಯಕ್ತಿಯಿಂದ ನಡೆಯಲು ಸಾಧ್ಯವಿಲ್ಲ. ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳ ಫಲಿತಾಂಶದ ಆಧಾರದ ಮೇಲೆ ನಡೆಯುತ್ತದೆ ಎಂದರು.

ಮಾದರಿ ಗಣಿತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಕೆ.ಎಂ ಚನ್ನಬಸವಗೆ ₹5 ಸಾವಿರ ನಗದು ಬಹುಮಾನ ವಿತರಿಸಲಾಯಿತು.

ಜೀವನ್ ಕುಮಾರ್ ವೈ, ತೋಫಿಕ್ ಅಹಮ್ಮದ್, ಮಂಜುನಾಥ ನಾಯಕ್, ಕೆ.ವಿಶ್ವಾಸ್, ಎಂ.ಅಪೂರ್ವ, ಎ.ವಿ ಸುರೇಂದ್ರ, ಭೀಮಮ್ಮ, ವಿ. ಸೃಷ್ಟಿ, ಸಿಂಧು ಅವರಿಗೆ ಎಕ್ಸಲೆಂಟ್ ಗಣಿತ ಪುಸ್ತಕ ವಿತರಿಸಲಾಯಿತು.

ಗಣಿತ ವಿಷಯ ಬೋಧಕರಿಗೆ ಸನ್ಮಾನಿಸಲಾಯಿತು

ಡಾ. ಎಸ್ ಪ್ರವೀಣ್ ಕುಮಾರ್, ಸಿ.ಸುರೇಂದ್ರರೆಡ್ಡಿ, ಕೊಂಡವೀಟಿ ಗಾಂಧಿ, ಸದಾನಲ ವಿನೋದ್, ಆನಂದ್ ಅಕ್ಕಿ , ತೇಜಸ್ಸು, ಸರಿತಾ, ಕಲಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT