ಕೊಪ್ಪಳ: ಜಿಲ್ಲಾ ವಕೀಲರ ಸಂಘದ ವತಿಯಿಂದ ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಡಿ. 6ರಂದು ಬೆಳಿಗ್ಗೆ 10 ಗಂಟೆಗ ವಕೀಲರ ದಿನದ ಕಾರ್ಯಕ್ರಮ ಜರುಗಲಿದೆ.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಅವರು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಬೆಳಿಗ್ಗೆ ನಡೆಯುವ ವಕೀಲರ ದಿನದ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸಷೆನ್ಸ್ ನ್ಯಾಯಾಧೀಶ ಸಿ. ಚಂದ್ರಶೇಖರ್ ಅವರು ಉದ್ಘಾಟಿಸುವರು. ಧಾರವಾಡ ಹೈಕೋರ್ಟ್ನ ಪದಾಂಕಿತ ವಕೀಲ ಎಸ್.ಎಸ್. ಯಡ್ರಾಮಿ, ಧಾರವಾಡ ಪೀಠದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಗಂಗಾಧರ ಜಿ.ಎಂ. ಅವರು ಕಾನೂನು ಕೃತಿ ಬಿಡುಗಡೆ ಮಾಡುವರು’ ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ವಕೀಲರು ಪಾಲ್ಗೊಳ್ಳುವರು. ಕೊಪ್ಪಳದ ನ್ಯಾಯಾಲಯದಲ್ಲಿ 25 ವರ್ಷಗಳ ಅವಧಿಗೆ ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸಿದ ವಕೀಲರಿಗೆ ಸನ್ಮಾನ ಮತ್ತು ಮಧ್ಯಾಹ್ನ 3 ಗಂಟೆಯಿಂದ ಡಾ. ಸುಭಾಷಚಂದ್ರ ರಾಠೋಡ್ ಅವರಿಂದ ಉಪನ್ಯಾಸ ಜರುಗಲಿದೆ.

ಸಂಭ್ರಮಾಚರಣೆ: ಜಿಲ್ಲೆಗೆ ನೂತನ ನ್ಯಾಯಾಲಯಗಳ ಸಂಕೀರ್ಣ ಪ್ರಾರಂಭವಾಗಲು ಸಹಕಾರ ನೀಡಿದ ಜನಪ್ರತಿನಿಧಿಗಳು, ಕಂದಾಯ, ಲೋಕೋಪಯೋಗಿ ಮತ್ತು ಪೊಲೀಸ್ ಇಲಾಖೆ ಮುಖ್ಯಸ್ಥರಿಗೆ ಹಮ್ಮಿಕೊಂಡಿರುವ ಸನ್ಮಾನ ಕಾರ್ಯಕ್ರಮ ಸಂಜೆ 6 ಗಂಟೆಗೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಳ್ಳುವರು.

ವಕೀಲರ ಸಂಘದ ಉಪಾಧ್ಯಕ್ಷ ಬಿ.ವಿ. ಸಜ್ಜನ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.