ಶನಿವಾರ, ಅಕ್ಟೋಬರ್ 31, 2020
20 °C

ಚಿರತೆ ದಾಳಿ: ಬಾಲಕನಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ತಾಲ್ಲೂಕಿನ ಆನೆಗೊಂದಿಯ ವಾಲಿಕಿಲ್ಲಾ ಆದಿಶಕ್ತಿ ದೇಗುಲದ ಬಳಿ ಶನಿವಾರ ಚಿರತೆಯ ದಾಳಿಯಿಂದ ಹೈದರಾಬಾದ್‌ನ ಹೃತಿಕ್ (9) ಎಂಬ ಬಾಲಕ ಗಾಯಗೊಂಡಿದ್ದಾನೆ.

ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಹೃತಿಕ್‌ಗೆ ಹಿಂಬದಿಯಿಂದ ಚಿರತೆ ದಾಳಿ ಮಾಡಿತು. ಪೋಷಕರು ಮತ್ತು ಪ್ರವಾಸಿಗರು ಒಮ್ಮೆಲೇ ಕೂಗಿಕೊಂಡ ಕಾರಣ ಚಿರತೆ ಓಡಿ ಹೋಯಿತು. ಹೃತಿಕ್‌ ತಲೆಗೆ ಪರಚಿದ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಡಿಎಫ್‌ಒ ಭೇಟಿ: ಚಿರತೆ ದಾಳಿ ಹಿನ್ನೆಲೆಯಲ್ಲಿ ಭಾನುವಾರ ತಾಲ್ಲೂಕಿನ ಆನೆಗೊಂದಿ, ಸಾಣಾಪೂರ, ಹನುಮನಹಳ್ಳಿ ಜಂಗ್ಲಿ ರಂಗಾಪೂರ ಗುಡ್ಡ ಪ್ರದೇಶಕ್ಕೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಾಭಾನು, ತಾಲ್ಲೂಕು ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಜಂಗ್ಲಿ ರಂಗಾಪುರದಲ್ಲಿ ಚಿರತೆ ಸೆರೆಗಾಗಿ ಎರಡು ಬೋನುಗಳನ್ನು ಇಡಲು ಅವರು ಸೂಚಿಸಿದ್ದಾರೆ.

ತಾಲ್ಲೂಕಿನ ಆನೆಗೊಂದಿ, ಜಂಗ್ಲಿ ರಂಗಾಪುರ, ಚಿಕ್ಕ ರಾಂಪುರ ಮತ್ತು ಅಂಜನಾದ್ರಿಯಲ್ಲಿ ಎರಡು ದಿನಗಳಿಂದ ಚಿರತೆ ಮತ್ತು ಕರಡಿಗಳು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಜಂಗ್ಲಿ ರಂಗಾಪುರದಲ್ಲಿ ಈಚೆಗೆ ಜಾನುವಾರು ಮೇಯಿಸಲು ಹೋಗಿದ್ದ ಮಹಿಳೆ ಮೇಲೂ ಚಿರತೆ ದಾಳಿ ನಡೆಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.