ಸೋಮವಾರ, ಆಗಸ್ಟ್ 8, 2022
24 °C

ಕೊಪ್ಪಳ: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಇಲ್ಲಿಗೆ ಸಮೀಪದ ಕಿಡದಾಳ ರೈಲು ಗೇಟಿನ ಬಳಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಶನಿವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಳ್ಳಾರಿಯ ತೇಜಶ್ರೀ (23) ಆತ್ಮಹತ್ಯೆ ಮಾಡಿಕೊಂಡ‌ವರು. ಇಲ್ಲಿನ ವೈದ್ಯಕೀಯ ಆಸ್ಪತ್ರೆಯಲ್ಲಿ ಇಂಟರ್ನ್‌ಷಿಪ್ ಮಾಡುತ್ತಿದ್ದರು. ಹಲವು ತಿಂಗಳಿಂದ ಮಾನಸಿಕವಾಗಿ ನೊಂದಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೊಕೊ ಪೈಲಟ್ ಪ್ರಕಾರ, ಯುವತಿ ಆತಹತ್ಯೆ ಮಾಡಿಕೊಂಡಿದ್ದಾಳೆ. ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ ಎಂದು ಗದಗ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ತೇಜಶ್ರೀ ಅವರು ಬಳ್ಳಾರಿಯ ಸಾಹಿತಿ ವಿನೋದಾ ಕರ್ಣಂ ಅವರ ಪುತ್ರಿ. ವಿನೋದಾ ಅವರು ಘಟನೆ ಕುರಿತು ಫೇಸ್‌ಬುಕ್‌ನಲ್ಲಿ ‘ನನ್ನ ಮಗಳು ಡಾ. ತೇಜಶ್ರೀ ಅಪಘಾತದಲ್ಲಿ ತೀರಿಕೊಂಡಳು. ದೇವರು ನನ್ನ ದೇವರು.. ನನ್ನ ಜೀವ ಇನ್ನಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಓದಿ... ಕೊಪ್ಪಳ: ಮಹಿಳೆಯರ ಜೊತೆ ಅಸಭ್ಯ ವರ್ತನೆ, ತಲೆ ಮರೆಸಿಕೊಂಡಿದ್ದ ಶಿಕ್ಷಕನ ಬಂಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು