ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: ವಿರುಪಾಕ್ಷೇಶ್ವರ ದೇಗುಲದ ಹುಂಡಿ ಹಣ ಎಣಿಕೆ

Last Updated 7 ಆಗಸ್ಟ್ 2021, 12:07 IST
ಅಕ್ಷರ ಗಾತ್ರ

ಗಂಗಾವತಿ: ನಗರದ ಹಿರೇಜಂತಕಲ್ ಸಮೀಪದ ಪ್ರಸನ್ನ ಪಂಪಾ ವಿರುಪಾಕ್ಷೇಶ್ವರ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ಶನಿವಾರ ನಡೆಯಿತು.

ತಹಶೀಲ್ದಾರ್ ಯು.ನಾಗರಾಜ ಮಾತನಾಡಿ, ಎರಡು ವರ್ಷಗಳಿಂದ ಈ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಿರಲಿಲ್ಲ. ಇತ್ತೀಚಿಗೆ ಗಂಗಾವತಿ ತಾಲ್ಲೂಕಿನ ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಅದರಿಂದ ತಪ್ಪಿಸಲು ಕೋವಿಡ್ ಮಾರ್ಗಸೂಚಿ ನಿಯಮಗಳ ಪ್ರಕಾರ ಹುಂಡಿ ಹಣ ಎಣಿಕೆ ಮಾಡಲಾಯಿತು ಎಂದರು.

ಈ ವೇಳೆ ಪ್ರಸನ್ನ ಪಂಪಾ ವಿರುಪಾಕ್ಷೇಶ್ವರ ದೇವಸ್ಥಾನ ಹುಂಡಿಯಲ್ಲಿ ಒಟ್ಟು ₹ 1,29,530 ಸಂಗ್ರಹವಾಗಿದೆ. ಈ ಹಿಂದೆ ಫೆಬ್ರವರಿ 22, 2019 ರಂದು ಪ್ರಸನ್ನ ಪಂಪಾ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ ಮಾಡಿದ್ದ ವೇಳೆಯಲ್ಲಿ ಒಟ್ಟು ₹ 58,380 ಸಂಗ್ರಹವಾಗಿತ್ತು ಎಂದರು.

ಗ್ರೇಡ್ 2 ತಹಶೀಲ್ದಾರ್ ವಿ.ಎಚ್.ಹೊರಪೇಟಿ, ದೇವಸ್ಥಾನದ ಕಾರ್ಯದರ್ಶಿ ಮಂಜುನಾಥ ಹಿರೇಮಠ, ಗಂಗಾವತಿ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ಅಭೀಷೆಕ, ಮಹಾಲಕ್ಷ್ಮೀ, ಕಾವ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT