ಸೋಮವಾರ, ಆಗಸ್ಟ್ 15, 2022
27 °C

ನವವೃಂದಾವನ ವಿವಾದ: ಜುಲೈ 5ರ ವರೆಗೆ ಕಾಲಾವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ನವವೃಂದಾವನ ಗಡ್ಡೆಯ ವೃಂದಾವನ ವಿವಾದಕ್ಕೆ ಸಂಬಂಧಪಟ್ಟ ರಾಯರ ಹಾಗೂ ಉತ್ತರಾದಿಮಠಗಳ ಭಕ್ತರ ನಡುವೆ ಸೋಮವಾರ ಸಭೆ ನಡೆಯಿತು.

ಕೊಪ್ಪಳ ಉಪವಿಭಾಗಾಧಿಕಾರಿ ಬಸವಣ್ಯಪ್ಪ ಕಲಶೆಟ್ಟಿ ಮಾತನಾಡಿ ‘ಹಲವು ವರ್ಷಗಳ ಇತಿಹಾಸವಿರುವ ನವವೃಂದಾವನ ಗಡ್ಡೆಯಲ್ಲಿ 9 ಯತಿಗಳ ಬೃಂದಾವನಗಳಿದ್ದು, ಈಗ  ರಘುವರ್ಯ ತೀರ್ಥರು ಹಾಗೂ ಜಯತೀರ್ಥರು ಎಂಬ ಯತಿಗಳ ಕುರಿತು ವೃಂದಾವನದಲ್ಲಿ ವಿವಾದ ಉಂಟಾಗಿದೆ‘‍ ಎಂದರು.

’ಉತ್ತರಾದಿಮಠ, ರಾಯರಮಠದ ಭಕ್ತರು ಇಬ್ಬರು ಒಂದೇ ಸಮಯದಲ್ಲಿ ಒಂದೇ ವೃಂದಾವನಕ್ಕೆ ಪೂಜೆ, ಆರಾಧನೆ ಮಾಡಲು ನಿರ್ಧಾರ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಎರಡೂ ಮಠಗಳ ಭಕ್ತರು ಹಾಗೂ ವಕೀಲರನ್ನ ಕರೆಯಿಸಿ ಚರ್ಚಿಸಲಾಗುವುದು‘ ಎಂದರು.

’ಎರಡು ಮಠದವರು ಸೇರಿ ಒಟ್ಟಿಗೆ ಪೂಜೆ, ಆರಾಧನೆ ಮಾಡುವಂತೆ ಹೇಳಲಾಗುತ್ತಿದ್ದು  ಇದಕ್ಕೆ ರಾಯರ ಮಠದವರು ಒಪ್ಪಿದರೆ, ಉತ್ತಾರಾದಿ ಮಠದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತದ ವತಿಯಿಂದ ಒಟ್ಟಿಗೆ ಪೂಜೆ ನಡೆಸುವ ಕುರಿತು ಅಭಿಪ್ರಾಯ ತಿಳಿಸುವಂತೆ ಎರಡೂ ಮಠದವರಿಗೆ ಜು. 5ರ ವರೆಗೆ ಕಾಲಾವಕಾಶ ನೀಡಲಾಗಿದೆ. ಎರಡು ಮಠಗಳ ಮುಖ್ಯಸ್ಥರ ತೀರ್ಮಾನ ನೋಡಿಕೊಂಡು ಜಿಲ್ಲಾಡಳಿತ ಮುಂದಿನ ನಿರ್ಧಾರ ಕೈಗೊಳ್ಳಲಿದೆ’ ಎಂದರು.

ತಹಶೀಲ್ದಾರ್‌ ಯು.ನಾಗರಾಜ, ಗ್ರಾಮೀಣ ಠಾಣೆಯ ಪಿಐ ಮಂಜುನಾಥ ಹಾಗೂ ಸೇರಿದಂತೆ ಎರಡು ಮಠಗಳ ಭಕ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು