ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PU Result | ಕುಕನೂರು: ಉತ್ತಮ ಸಾಧನೆಗೈದ ಪತ್ರಿಕೆ ಹಂಚುವ ಬಾಲಕ

Published 11 ಏಪ್ರಿಲ್ 2024, 7:40 IST
Last Updated 11 ಏಪ್ರಿಲ್ 2024, 7:40 IST
ಅಕ್ಷರ ಗಾತ್ರ

ಕುಕನೂರು: ಪಟ್ಟಣದಲ್ಲಿ ನಿತ್ಯ ‘ಪ್ರಜಾವಾಣಿ’ ಸೇರಿದಂತೆ ವಿವಿಧ ದಿನಪತ್ರಿಕೆಯನ್ನು ಮನೆಮನೆಗೆ ಸೈಕಲ್‌ನಲ್ಲಿ ಹಂಚುತ್ತಿದ್ದ ಬಾಲಕ ದ್ವಿತೀಯ ಪಿಯುಸಿ ವಿಜ್ಞಾನ ವಿಷಯದ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ.

ಇಲ್ಲಿನ ಕೆಎಲ್ಇ ಪದವಿಪೂರ್ವ ಕಾಲೇಜಿನ ಆಕಾಶ್‌ ಶೇಖಪ್ಪ ಕಮ್ಮಾರ್‌ ಶೇ. 78.28ರಷ್ಟು ಫಲಿತಾಂಶ ಪಡೆದಿದ್ದಾನೆ. ಕುಟುಂಬ ನಿರ್ವಹಣೆಗಾಗಿ ನಿತ್ಯವೂ ಬೆಳಗಿನ ಜಾವ ಎರಡು ಗಂಟೆ ಪತ್ರಿಕೆ ಹಾಕಿ, ವಿಜ್ಞಾನ ವಿಭಾಗದಲ್ಲಿ ಈ ಸಾಧನೆ ಮಾಡಿದ್ದು ವಿಶೇಷ. 600ಕ್ಕೆ ಒಟ್ಟು 471 ಅಂಕಗಳನ್ನು ಗಳಿಸಿದ್ದಾನೆ.

‘ಮನೆಯಲ್ಲಿ ಬಡತನ ಇರುವುದರಿಂದ ಅನಿವಾರ್ಯವಾಗಿ ಪತ್ರಿಕೆ ಹಂಚುವ ಕೆಲಸ ಮಾಡುತ್ತಿದ್ದೇನೆ. ಫಲಿತಾಂಶ ಬರುವ ದಿನವೂ ನಾನು ಬೆಳಗ್ಗೆ ಪತ್ರಿಕೆ ಹಾಕಿದ್ದೇನೆ. ನಾಳೆಯೂ ಹಾಕುತ್ತೇನೆ. ಮನೆಯಲ್ಲಿ ಆರ್ಥಿಕ ತೊಂದರೆ ಇರುವುದರಿಂದ ನನ್ನಿಂದಲೂ ಒಂದಿಷ್ಟುಸಹಾಯ ಆಗಲಿ ಮತ್ತು ನನ್ನ ಓದಿಗೂ ಅನುಕೂಲವಾಗುತ್ತದೆ’ ಎಂದು ಆಕಾಶ್‌ ಹೇಳಿದರು.

ಬೆಳಗ್ಗೆ ನಿತ್ಯವೂ 5ರಿಂದ 7 ಗಂಟೆ ತನಕ ಪತ್ರಿಕೆ ಹಾಕುವ ಆಕಾಶ್‌ ಬಳಿಕ ಮನೆಯ ಕೆಲಸಗಳ ನಿರ್ವಹಣೆ ಜೊತೆಗೆ ಓದಿಗೂ ಸಮಯ ಮೀಸಲಿಟ್ಟುಕೊಂಡಿದ್ದಾನೆ. 

‘ಫಲಿತಾಂಶದಿಂದಾಗಿ ಮನೆಯವರೆಲ್ಲರೂ ಖುಷಿಯಾಗಿದ್ದಾರೆ. ಉನ್ನತ ವ್ಯಾಸಂಗ ಪಡೆದು ಯುಪಿಎಸ್‌ಸಿ ಪರೀಕ್ಷೆ ಎದುರಿಸುವ ಗುರಿ ಹೊಂದಿದ್ದೇನೆ. ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಅಗ್ರಸ್ಥಾನ ಗಳಿಸಿದ್ದು, ಈಗ ಬಿಎಸ್‌ಸಿ ಅಗ್ರಿ ಮಾಡುವ ಆಸೆ ಹೊಂದಿದ್ದೇನೆ’ ಎಂದರು.

‘ಮಗನ ಸಾಧನೆಯಿಂದ ಖುಷಿಯಾಗಿದ್ದು, ಆತನ ಓದಿಗೆ ಬೆಂಗಾವಲಾಗಿ ನಿಲ್ಲುತ್ತೇನೆ’ ಎಂದು ಆಕಾಶ್‌ ತಾಯಿ ಸುಮಂಗಲ ಕಮ್ಮಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT