ಮಂಗಳವಾರ, ಜೂನ್ 28, 2022
28 °C

ಕಳಪೆ ಕಾಮಗಾರಿ: ಸಂಸದರಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳವಂಡಿ: ‘ಸಣ್ಣ ನೀರಾವರಿ ಇಲಾಖೆಯಿಂದ ಅಳವಂಡಿ-ತಳಕಲ್ ಮಾರ್ಗ ಮಧ್ಯೆದ ಹಳ್ಳದಲ್ಲಿ ಬಾಂದಾರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಮಣ್ಣು ಮಿಶ್ರಿತ ಮರಳು ಬಳಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಗ್ರಾಮಸ್ಥರು ಸಂಸದ ಸಂಗಣ್ಣ ಕರಡಿ ಅವರನ್ನು ಒತ್ತಾಯಿಸಿದರು.

ಸೇತುವೆ ಕಾಮಗಾರಿ ಕಾಟಾಚಾರಕ್ಕೆ ಎಂಬಂತೆ ನಡೆಯುತ್ತಿದೆ. ಉತ್ಕೃಷ್ಟ ಮರಳು, ಸಿಮೆಂಟ್‌ ಬಳಸಿ ಸೇತುವೆ ನಿರ್ಮಿಸಿದರೆ ಬಹು ದಿನಗಳದವರೆಗೆ ತಾಳಿಕೆ ಬರುತ್ತದೆ. ಸಂಬಂಧಿಸಿದ ಗುತ್ತಿಗೆದಾರರು, ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಮದ ಮುಖಂಡರಾದ ವಸಂತ ನಾಗರಳ್ಳಿ, ಮಲ್ಲಪ್ಪ ಬೆಣಕಲ್, ಚಂದ್ರಪ್ಪ ಜಂತ್ಲಿ, ಜಗದೀಶ, ಮಂಜುನಾಥ ಜಂತ್ಲಿ ಹಾಗೂ ಮಹಮದ್ ಸಾಬ್ ಕಿಲ್ಲೇದ ಇದ್ದರು. ಮನವಿ ಸ್ವೀಕರಿಸಿದ ಸಂಸದರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.