ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಅಂಗವಿಕಲರ ಬಸ್‌ಪಾಸ್‌ ನವೀಕರಣಕ್ಕೆ ಫೆ.29 ರವರೆಗೆ ಅವಕಾಶ

Published 30 ಡಿಸೆಂಬರ್ 2023, 13:01 IST
Last Updated 30 ಡಿಸೆಂಬರ್ 2023, 13:01 IST
ಅಕ್ಷರ ಗಾತ್ರ

ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ವತಿಯಿಂದ 2024ನೇ ಸಾಲಿನ ರಿಯಾಯತಿ ದರದ ಅಂಗವಿಕಲರ ಬಸ್‌ಪಾಸ್‌ ನವೀಕರಣ ಮಾಡಿಕೊಳ್ಳಲು ಜ. 1ರಿಂದ ಫೆ. 29ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಫಲಾನುಭವಿಗಳು 2023ರ ಬಸ್‌ಪಾಸ್ ಮತ್ತು ಅಂಗವಿಕಲರ ಗುರುತಿನ ಚೀಟಿಯನ್ನು ಪಡೆದಿರುವ ಇಲಾಖೆಯಿಂದ ದೃಢೀಕರಣ ಪಡೆದು ₹ 660 ನಗದು ರೂಪದಲ್ಲಿ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಗಂಗಾವತಿ ಮತ್ತು ಕುಕನೂರ ಬಸ್ ನಿಲ್ದಾಣಗಳಲ್ಲಿರುವ ನಿಗಮದ ಪಾಸ್ ಕೌಂಟರ್‌ಗಳಲ್ಲಿ ಪಾವತಿಸಿ ಪಾಸ್‌ ನವೀಕರಣ ಮಾಡಿಕೊಳ್ಳಬಹುದು.

ಹಾಲಿ ಪಾಸ್‌ ಬಳಸಿಕೊಂಡು ಫೆ. 29ರ ತನಕ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT