ಗಂಗಾವತಿ: ನಗರದ ಸರ್ಕಾರಿ ಗೋದಾಮಿನಿಂದ ವಿದೇಶಕ್ಕೆ ಲಾಲಾ ರೈಸ್ ಬ್ಯಾಗ್ ಹೆಸರಿನಲ್ಲಿ ಆಕ್ರಮ ಅಕ್ಕಿ ಸಾಗಾಣಿಕೆ ಪ್ರಕರಣ ಮಾಸುವ ಮುನ್ನವೇ, ನಗರದ ಹಮಾಲರ ಕಾಲೊನಿ ಬಳಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನ ಮೇಲೆ ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಸರ್ಕಾರ ಅನ್ಯಭಾಗ್ಯ ಯೋಜನೆಯಡಿ ಬಡವರಿಗೆ ಅಕ್ಕಿ ನೀಡುತ್ತಿದ್ದು, ಕೆಲ ದಂಧೆಕೊರರು ಗ್ರಾಮೀಣ, ನಗರದ ಭಾಗದಲ್ಲಿ ಕಡಿಮೆ ಹಣಕ್ಕೆ ಅಕ್ಕಿ ಖರೀದಿಸಿ, ರೈಸ್ ಮಿಲ್ಗಳಿಗೆ ಸಾಗಿಸುತ್ತಿದ್ದಾರೆ.

ಈಚೆಗೆ ಸರ್ಕಾರಿ ಗೋದಾಮಿನಿಂದಲೇ 168 ಕ್ವಿಂಟಲ್ ಅಕ್ಕಿ ವಿದೇಶಕ್ಕೆ ಲಾರಿ ಮೂಲಕ ರವಾನಿಸಲು, ಅಧಿಕಾರಿಗಳ ಸಹಾಯದಿಂದ ದಂಧೆಕೋರರು ಸಂಚು ನಡೆಸಿ, ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಾಗಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

ಆದರೆ ಗಂಗಾವತಿ ತಾಲ್ಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ ನಿಲ್ಲುತ್ತಿಲ್ಲ. ಶುಕ್ರವಾರ ಚಂದ್ರಹಾಸ ಚಿತ್ರಮಂದಿರ ರಸ್ತೆಯಿಂದ 40ಕ್ಕೂ ಹೆಚ್ಚು ಚೀಲದಲ್ಲಿ ಸಾಗಿಸುತ್ತಿದ್ದ ವಾಹನ ನೋಡಿದ ಸಂಘಟನೆ ಸದಸ್ಯರು, ಬೆನ್ನತ್ತಿ, ಎಪಿಎಂಪಿ ಬಳಿ ಹಮಾಲರ ಕಾಲೊನಿ ಬಳಿ ವಾಹನ ತಡೆದು ನಿಲ್ಲಿಸಿದಾಗ ಪಡಿತರ ಅಕ್ಕಿ ಆಕ್ರಮ ಸಾಗಾಣಿಕೆ ಬೆಳಕಿಗೆ ಬಂದಿದೆ.

ಈ ವೇಳೆ ವಾಹನ ಸವಾರರು, ಸಂಘಟನೆ ಸದಸ್ಯರೊಂದಿಗೆ ಜಗಳಕ್ಕೆ ಇಳಿದಿದ್ದು, ಕೂಡಲೇ ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಶಿವಪ್ಪ ಮಾದಿಗ ಅವರು 112ಗೆ ಕರೆ ಮಾಡಿದ ಕೂಡಲೇ ವಾಹನ ಸವಾರರು, ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಧಾವಿಸಿ, ವಾಹನ ಪರಿಶೀಲಿಸಿ, ವಾಹನವನ್ನು ನಗರಠಾಣೆಗೆ ಕೊಂಡೊಯ್ದಿದ್ದಾರೆ. ಮಂಜುನಾಥ ಸಂಗಾಪುರ ಉಪಸ್ಥಿತರಿದ್ದರು. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.