ಯಲಬುರ್ಗಾ: ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ನಂ.1 ಶಾಲೆಯಲ್ಲಿ ಎರಡು ಚೀಲ ತೊಗರಿ ಬೇಳೆ ಕಳ್ಳತನವಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡದೇ ನಿರ್ಲಕ್ಷಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆ ಕಾಯ್ದಿರಿಸಿ ಶಾಲೆಯ ಮುಖ್ಯ ಶಿಕ್ಷಕ ರುದ್ರಗೌಡ ಗೋಣಿ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ ಅಮಾನತು ಮಾಡಿದ್ದಾರೆ.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಕೂಡ ಶಾಲೆಗೆ ಭೇಟಿ ನೀಡಿ ಕಳ್ಳತನ ಆಗಿರುವ ಬಗ್ಗೆ ದೃಢಪಡಿಸಿದ್ದರು. ಆದರೂ ಈ ಬಗ್ಗೆ ಠಾಣೆಗೆ ದೂರು ನೀಡದೇ ನಿರ್ಲಕ್ಷಿಸಿದ್ದು ಕರ್ತವ್ಯ ಲೋಪ ಎಸಗಿದ್ದಾರೆಂದು ಪರಿಗಣಿಸಿ ಕೆಸಿಎಸ್‍ಆರ್ ನಿಯಮಾವಳಿ ಪ್ರಕಾರ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.