ಕಾರಟಗಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿರುವ ಬರಗಾಲ ಸಿದ್ದಪ್ಪ ಮಠದ ಆವರಣದಲ್ಲಿ ಸ್ವಾಮೀಜಿಯೊಬ್ಬರು ಐದು ದಿನಗಳಿಂದ ಮಾವಿನ ಮರದ ಮೇಲೆ ಮೌನಾನುಷ್ಠಾನ ವೃತ ಕೈಗೊಂಡಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬಾದ್ಯಪುರದ ಸಚ್ಚಿದಾನಂದ ಸ್ವಾಮೀಜಿ ಒಟ್ಟು 101 ದಿನಗಳ ಕಾಲ ಲೋಕ ಕಲ್ಯಾಣಕ್ಕಾಗಿ ಮರ ಏರಿ ವೃತ ಮಾಡುತ್ತಿದ್ದಾರೆ ಎಂದು ಭಕ್ತರು ತಿಳಿಸಿದರು. ಇವರು ಎಂಜಿನಿಯರ್ ಪದವೀಧರರು.

ದಿನಕ್ಕೆ ಒಂದು ಲೋಟ ಹಾಲು ಕುಡಿಯುವುದು ಮಾತ್ರ ಇವರ ಆಹಾರ. 2012ರಲ್ಲಿಯೂ ಇವರು ಆಲದಮರದಲ್ಲಿ ಅನುಷ್ಠಾನ ಕುಳಿತಿದ್ದರು ಎಂದು ಭಕ್ತರು ಸ್ಮರಿಸುತ್ತಾರೆ. ಸಚ್ಚಿದಾನಂದರು ಮುಷ್ಟೂರ ಮಠಕ್ಕೆ ಆಗಾಗ ಬಂದು ಹೋಗುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.