‘ರಾಯರಡ್ಡಿ ರಾಜ್ಯದ ಗೃಹ ಸಚಿವರನ್ನು ನೋಡಲಿ’
ಕೊಪ್ಪಳ: 'ದೆಹಲಿಯಲ್ಲಿ ನಡೆದ ಸ್ಫೋಟಕ್ಕಾಗಿ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ಕೇಳುವ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಮ್ಮದೇ ಸರ್ಕಾರದ ಗೃಹ ಸಚಿವ ಪರಮೇಶ್ವರ ಅವರ ಕಾರ್ಯ ವೈಖರಿ ನೋಡಲಿ ಎಂದು ಮಾಜಿ ಸಚಿವರಾದ ಹಾಲಪ್ಪ ಆಚಾರ್ ಹಾಗೂ ಬಿ. ಶ್ರೀರಾಮಲು ಹೇಳಿದರು. ‘ಪರಪ್ಪರ ಅಗ್ರಹಾರದಲ್ಲಿ ಭಯೋತ್ಪಾದಕರು ನೃತ್ಯ ಮಾಡುತ್ತಿದ್ದಾರೆ. ರಾಜ್ಯದ ಗೃಹ ಮಂತ್ರಿ ಏನು ಮಾಡುತ್ತಿದ್ದಾರೆ’ ಎಂದು ರಾಮುಲು ಪ್ರಶ್ನಿಸಿದರೆ ‘ದೆಹಲಿಯಲ್ಲಿ ಸ್ಫೋಟ ನಡೆದ 24 ತಾಸಿನ ಒಳಗೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಕೇಂದ್ರದ ನಾಯಕರು ರಾಜ್ಯದವರಿಂದ ಕೇಳಿ ಕಲಿಯುವಂಥದ್ದು ಏನೂ ಇಲ್ಲ. ದೇಶದ ಸುರಕ್ಷತೆ ವಿಷಯದಲ್ಲಿಯೂ ರಾಯರಡ್ಡಿ ನೀಚ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಹಾಲಪ್ಪ ಆಚಾರ್ ಆಕ್ರೋಶ ವ್ಯಕ್ತಪಡಿಸಿದರು.