ಗುರುವಾರ , ಆಗಸ್ಟ್ 11, 2022
23 °C

ಶಿಕ್ಷಕರ ದಿನ: ಕೋಟೆ ಆವರಣ ಸ್ವಚ್ಛತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಶಿಕ್ಷಕರ ಕಲಾ ಸಂಘದ ಪದಾಧಿಕಾರಿಗಳು ನಗರದ ಐತಿಹಾಸಿಕ ಕೊಪ್ಪಳ ಕೋಟೆ(ಕಿಲ್ಲೆ)ಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಶಿಕ್ಷಕರ ದಿನ ಆಚರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಮಣ್ಣ ಶ್ಯಾವಿ,‘ಇತಿಹಾಸದ ಕುರಿತು ತಿಳಿದುಕೊಳ್ಳುವುರು ನಮ್ಮೆಲ್ಲರ ಕರ್ತವ್ಯ. ಇತಿಹಾಸವನ್ನು ತಿಳಿಯದವ ಇತಿಹಾಸವನ್ನು ಸೃಷ್ಟಿಸಲಾರ ಅನ್ನುವ ಮಾತಿನಂತೆ ಈ ಐತಿಹಾಸಿಕ ತಾಣದಲ್ಲಿ ನಾವಿಂದು ಶಿಕ್ಷಕರ ದಿನ ಆಚರಣೆ ಮಾಡಿದ್ದೇವೆ’ ಎಂದರು.

ಪ್ರಾಣೇಶ ಪೂಜಾರ ಮಾತನಾಡಿ,‘ಕಲಾಸಂಘದ ದಶಮಾನೋತ್ಸವ ಕಾರ್ಯಕ್ರಮಕ್ಕೆ ಉತ್ತಮ ನಾಟಕವೊಂದನ್ನು ಪ್ರದರ್ಶನ ಮಾಡಲು ಕಲಾಸಂಘ ಸಜ್ಜಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶವಿರದ ಕಾರಣ, ಕೊಪ್ಪಳ ಕೋಟೆಯಲ್ಲಿ ಶ್ರಮದಾನ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಿ ಆಚರಿಸಲಾಗುತ್ತಿದೆ’ ಎಂದು
ಹೇಳಿದರು.

ಸಹ ಗ್ರಂಥಪಾಲಕ ನಾಗರಾಜನಾಯಕ ಡಿ.ಡೊಳ್ಳಿನ ಮಾತನಾಡಿದರು.

ಮಕ್ಕಳಾದ ಪವನ ಪಿ.ಪೂಜಾರ, ಉದಯ ಎಮ್.ಡೊಳ್ಳಿನ, ಬೃಂದಾ, ಭೂಮಿಕಾ, ವಿದ್ಯಾರ್ಥಿಗಳಾದ ಜ್ಯೋತಿ, ಮಹೇಶ ಇದ್ದರು.

ಯೋಗಾನರಸಿಂಹ ಪಿ.ಕೆ. ರಂಗಗೀತೆಗಳನ್ನು ಹಾಡಿ, ಪ್ರಾರ್ಥಿಸಿದರು. ಯೋಗಪ್ಪ ನಿರೂಪಿಸಿದರು. ಸಂಗಮ್ಮ ಮಟ್ಟಿ ವಂದಿಸಿದರು.

‘ಯುವಕರಿಂದ ಸ್ವಚ್ಛತಾ ಕಾರ್ಯ

ಕೊಪ್ಪಳ: ನಗರದ ದೇವಾಂಗ ಮಠದ ಆವರಣದಲ್ಲಿ ಯುವ ಬ್ರಿಗೇಡ್ ತಂಡದ ಯುವಕರು ಭಾನುವಾರ ಸ್ವಚ್ಛತಾ ಕಾರ್ಯ
ಕೈಗೊಂಡರು.

ಮುಂದಿನ ವರ್ಷಕ್ಕೆ ಭಾರತ ಸ್ವಾತಂತ್ರ್ಯ ಗಳಿಸಿ 75 ವರ್ಷ ಆಗಲಿದೆ. ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದ ಬಿಗ್ರೇಡ್‌ನಿಂದ ರಾಜ್ಯದಾದ್ಯಂತ ‘ಸ್ವರಾಜ್ಯಕ್ಕೆ ಮುಕ್ಕಾಲು ನೂರು’ ಎಂಬ ಹಮ್ಮಿಕೊಳ್ಳಲಾಗುವುದು ಎಂದು ಬ್ರಿಗೇಡ್‌ನ ಪ್ರಮುಖರು ತಿಳಿಸಿದರು.

ರಾಜ್ಯದಲ್ಲಿ 75ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ನಡೆದಿದೆ. ಯುವಕರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸಂಚಾಲಕ ವೀರೇಶ್ ಜಿ.ಕೆ. ಸೇರಿ 35ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು