ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ‘ಲಾಕ್‌ಡೌನ್‌ನಿಂದ ಬಡವರಿಗೆ ತೊಂದರೆ’

Last Updated 8 ಜೂನ್ 2021, 7:50 IST
ಅಕ್ಷರ ಗಾತ್ರ

ಕೊಪ್ಪಳ: ‘ಅವೈಜ್ಞಾನಿಕ ನಿಯಮಗಳಿಂದ ಜನರು ಆರ್ಥಿಕ ಸಂಕಷ್ಟದಿಂದ ಪರದಾಡುತ್ತಿದ್ದಾರೆ’ ಎಂದು ಜನಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿವೆ.

ಕೊರೊನಾ ಮಹಾಮಾರಿಯಿಂದ ಸಾಯುವುದಕ್ಕಿಂತ ಅಪಾರ ಸಂಖ್ಯೆಯ ಜನ ಆಸ್ಪತ್ರೆಗಳಲ್ಲಿ ಏಕಾಂಗಿಯಾಗಿರುವುದು ಮತ್ತು ಪಿಪಿಇ ಕಿಟ್ ಧರಿಸಿ ಓಡಾಡುವವರನ್ನು ನೋಡಿ ಧೈರ್ಯಗೆಟ್ಟು ಭಯದಿಂದ ಹೃದಯಾಘಾತವಾಗಿ ಸಾಯುತ್ತಿದ್ದಾರೆ. ಅಲ್ಲದೆ ಬೆಡ್, ಆಮ್ಲಜನಕ, ಲಸಿಕೆ ಹಾಗೂ ವೆಂಟಿಲೇಟರ್ ಸಕಾಲಕ್ಕೆ ಸಿಗದೆ ಸಾಯುತ್ತಿದ್ದಾರೆ. ಕೆಲವರನ್ನು ಆಸ್ಪತ್ರೆಗಳಲ್ಲಿ ಸೇರಿಸಿಕೊಳ್ಳದೇ ಸತಾಯಿಸುತ್ತಿರುವುದರಿಂದ ಆಸ್ಪತ್ರೆಗಳ ಮುಂದೆ ಜೀವ ಬಿಡುವಂಥ ಘಟನೆಗಳು ಜರಗುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಕಳೇಬರ ನೀಡಲು ಸತಾಯಿಸುವುದು ಅಮಾನವೀಯ ಎಂದು ಹೇಳಿದ್ದಾರೆ. ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಹೋಂ ಡೆಲಿವರಿ ಎಂದು ಹೇಳುತ್ತಾರೆ. ಆರ್ಥಿಕವಾಗಿ ಮಧ್ಯಮ ವರ್ಗಕ್ಕಿಂತ ಕೆಳಮಟ್ಟದ ಜನರು ₹ 100, ₹ 200 ಗಳ ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಅಂಗಡಿಯವರು ವಿಪರೀತ ಬೆಲೆಗೆ ದಿನಸಿ ಮಾರುವುದು ಹಾಗೂ ಹೋಂ ಡೆಲಿವರಿಯ ಸೇವೆಗೆ ಹೆಚ್ಚುವರಿಯಾಗಿ ₹ 40 ವಿಧಿಸುತ್ತಾರೆ. ಈ ಪದ್ಧತಿ ಬಡವರಿಗೆ ಹೊಂದುವುದಿಲ್ಲ ಎಂದಿದ್ದಾರೆ.

ಮತ್ತೆ ಚುನಾವಣೆ ಬಂದಾಗ ಮಾತ್ರ ಜನರ ಬಳಿಗೆ ಹೋಗುವಂತಹ ಜನಪ್ರತಿನಿಧಿಗಳ ಬಗ್ಗೆ ಜನರು ಎಚ್ಚರಗೊಳ್ಳಬೇಕಾಗಿದೆ. ದಿನ ದುಡಿದು ತಿನ್ನುವ ಜನರ ತಾಳ್ಮೆ ಪರೀಕ್ಷಿಸುವುದು ಬೇಡ ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್.ಪಿ. ಚಿಕೇನಕೊಪ್ಪ. ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ಸಾಧಿಕ್ ದಫೇದಾರ್ ಪೈಲ್ವಾನ್. ಗಾಳೆಪ್ಪ ಮುಂಗೋಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT