ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಜಿಲ್ಲೆಯಲ್ಲಿ 24 ಮತದಾನ ಕೇಂದ್ರಗಳು

ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ 3ರಂದು ಮತದಾನ
Published 31 ಮೇ 2024, 13:16 IST
Last Updated 31 ಮೇ 2024, 13:16 IST
ಅಕ್ಷರ ಗಾತ್ರ

ಕೊಪ್ಪಳ: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನ ಜೂ. 3ರಂದು ನಡೆಯಲಿದ್ದು, ಜಿಲ್ಲೆಯಲ್ಲಿ 24 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.

ಕುಷ್ಟಗಿ ತಾಲ್ಲೂಕಿನಲ್ಲಿ 5 ಕೇಂದ್ರಗಳಿದ್ದು, 2,224 ಮತದಾರರಿದ್ದಾರೆ. ಕಾರಟಗಿ ತಾಲ್ಲೂಕಿನಲ್ಲಿ 2 ಕೇಂದ್ರಗಳಿದ್ದು, 1,158, ಕನಕಗಿರಿ ತಾಲ್ಲೂಕಿನಲ್ಲಿ 3 ಕೇಂದ್ರಗಳಿದ್ದು, 668, ಗಂಗಾವತಿ ತಾಲ್ಲೂಕಿನಲ್ಲಿ 4 ಕೇಂದ್ರಗಳಿದ್ದು 3,194, ಯಲಬುರ್ಗಾ ತಾಲ್ಲೂಕಿನಲ್ಲಿ 2 ಕೇಂದ್ರಗಳಿದ್ದು, 1,332, ಕುಕನೂರು ತಾಲ್ಲೂಕಿನಲ್ಲಿ 2 ಕೇಂದ್ರಗಳಿದ್ದು 1,083 ಮತ್ತು ಕೊಪ್ಪಳ ತಾಲ್ಲೂಕಿನಲ್ಲಿ 6 ಕೇಂದ್ರಗಳಿದ್ದು, 4,084 ಪದವೀಧರ ಮತದಾರರು ಇದ್ದಾರೆ. ಒಟ್ಟು 13,743 ಪದವೀಧರ ಮತದಾರರಿದ್ದಾರೆ.

2ರಂದು ಆಯಾ ತಾಲ್ಲೂಕುಗಳ ತಹಶೀಲ್ದಾರ್ ಕಚೇರಿಗಳಲ್ಲಿ ಮಸ್ಟರಿಂಗ್ ಕಾರ್ಯ ನಿಗದಿಪಡಿಸಲಾಗಿದ್ದು, ಮಸ್ಟರಿಂಗ್ ನಂತರ ಮತದಾನ ಸಿಬ್ಬಂದಿ ಮತಪೆಟ್ಟಿಗೆ ಮತ್ತು ಮತದಾನ ಸಾಮಗ್ರಿಗಳೊಂದಿಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳುವರು. 3ರಂದು ಬೆಳಿಗ್ಗೆ 08 ಗಂಟೆಯಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಲಿದೆ.

3ರಂದು ಮತದಾನ ಮುಕ್ತಾಯವಾದ ನಂತರ ಆಯಾ ತಾಲ್ಲೂಕು ತಹಶೀಲ್ದಾರ್‌ ಕಚೇರಿಯಲ್ಲಿ ಡಿ-ಮಸ್ಟರಿಂಗ್ ಕಾರ್ಯ ಕೈಗೊಂಡು ಜಿಲ್ಲೆಯ ಎಲ್ಲಾ ಮತದಾನ ಕೇಂದ್ರಗಳ ಮತಪೆಟ್ಟಿಗೆ ಮತ್ತು ದಾಖಲಾತಿಗಳನ್ನು ಕಲಬುರಗಿಯ ಹೇಮರಡ್ಡಿ ಮಲ್ಲಮ್ಮ ಕಟ್ಟಡ ಸಭಾಂಗಣದಲ್ಲಿ ನಿರ್ಮಿಸಿರುವ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಿಡಲಾಗುವುದು ಎಂದು ಅವರು ಹೇಳಿದ್ದಾರೆ.

ವಿಶೇಷ ಸಾಂದರ್ಭಿಕ ರಜೆ

ಮತದಾನದ ದಿನದಂದು ವಿಧಾನ ಪರಿಷತ್ ಮತಕ್ಷೇತ್ರಗಳಲ್ಲಿನ ಸರ್ಕಾರಿ ಖಾಸಗಿ ಶಾಲಾ ಕಾಲೇಜುಗಳು ಅನುದಾನಿತ ಹಾಗೂ ಅನುದಾನರಹಿತ ವಿದ್ಯಾ ಸಂಸ್ಥೆಗಳು ರಾಷ್ಟಿಕೃತ ಹಾಗೂ ಇತರ ಬ್ಯಾಂಕುಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು ಉಳಿದ ಕೈಗಾರಿಕೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT