ಕೊಪ್ಪಳ: ಬಾಕಿ ಹಣ ಪಡೆದುಕೊಳ್ಳಲು ಹೊಸಪೇಟೆಯಿಂದ ಕುಷ್ಟಗಿಗೆ ಬಂದಿದ್ದ ಮಹಿಳೆ ಮೇಲೆ ನಾಲ್ಕು ಜನ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು, ಜಿಲ್ಲೆಯ

ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಭಾನುವಾರ ತಡರಾತ್ರಿ ಎಫ್ಐಆರ್ ದಾಖಲಾಗಿದೆ.

ಗದಗ ಜಿಲ್ಲೆ ಗಜೇಂದ್ರಗಡದ ಲಕ್ಷ್ಮಣ ಎಂಬಾತ ಮಹಿಳೆಗೆ ₹5,000 ಸಾಲ ಹಿಂತಿರುಗಿಸಬೇಕಿತ್ತು. ಈ ಹಣ ಪಡೆದುಕೊಳ್ಳಲು ಮಹಿಳೆ ಪೋನ್ ಮಾಡಿದಾಗ ಲಕ್ಷ್ಮಣ ಕುಷ್ಟಗಿಗೆ ಬರುವಂತೆ ಹೇಳಿದ್ದಾನೆ. ಮಹಿಳೆ ಅಲ್ಲಿಗೆ ಬಂದ ಬಳಿಕ ಅಲ್ಲಿಂದ ಬೈಕ್ ಮೇಲೆ ಕರೆದುಕೊಂಡು ಕುಷ್ಟಗಿ ಹಾಗೂ ಯಲಬುರ್ಗಾ ಮದ್ಲೂರ ಸೀಮೆಯಲ್ಲಿರುವ ಪಾಳು ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಇದೇ ವೇಳೆ ಬಂದ ಇತರ ಮೂವರು ಕೂಡ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾಳೆ.

ಕೃತ್ಯ ಎಸಗುವ ಮೊದಲು ಮಹಿಳೆಗೆ ಮದ್ಯ ಕುಡಿಸಲಾಗಿದೆ. ಮೊದಲ ಆರೋಪಿ ಲಕ್ಷ್ಮಣ ಹಾಗೂ ಇತರ ಮೂವರನ್ನು ವಶಕ್ಕೆ ಪಡೆಯಲಾಗಿದೆ, ಮಧ್ಯಾಹ್ನದ ವೇಳೆಗೆ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಹಿಳೆಯ ಪತಿ, ಅಪಘಾತವಾಗಿದೆ ಎಂದು ಪತ್ನಿ ಹೇಳಿದ್ದರಿಂದ ಬಂದಿದ್ದೇನೆ. ಪೊಲೀಸ್ ವಿಚಾರಣೆಯಿಂದ ಬಾಕಿ ವಿಷಯ ಗೊತ್ತಾಗಬೇಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.