ಗಂಗಾವತಿ: ಪಟ್ಟಣದ ರಸ್ತೆ ಅಭಿ ವೃದ್ಧಿಗೆ ಮೀಸಲಿರಿಸಿದ ಹಣವನ್ನು ಬೇರೆ ಕಾಮಗಾರಿಗಳಿಗೆ ಬಳಸುವಂತೆ ಪ್ರಾದೇಶಿಕ ಆಯುಕ್ತ ರಜನೀಶ್ ಗೋಯಲ್ ಬುಧವಾರ ಆದೇಶ ನೀಡಿದರು.

ಅಧಿಕಾರಿಗಳ ಬೇಜವಾಬ್ದಾರಿ ಮತ್ತು ವ್ಯಾಪಾರಿಗಳು ಪದೇ ಪದೇ ನ್ಯಾಯಾಲಯಕ್ಕೆ ಹೋಗುತ್ತಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಆದ್ದರಿಂದ ಇದಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಕಾಮಗಾರಿಗಳಿಗೆ ಬಳಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಹಂಪಿ ಅಭಿವೃದ್ಧಿ ಪ್ರಾಧಿಕಾರ, ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಹಾಗೂ ನಗರಸಭೆಯ ಅಭಿವೃದ್ಧಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಹೈದರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಕಾಮ ಗಾರಿ ಮುಗಿದು, ಪಟ್ಟಣ ಮತ್ತು ಹಳ್ಳಿಗಳ ರಸ್ತೆ ವಿಸ್ತರಣೆ ಕಾರ್ಯ ನಡೆದಿದೆ.ಆದರೆ ನಗರದಲ್ಲಿ ಕೆಲ ವರ್ತಕರು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಮೊರೆ ಹೊಗುತ್ತಿರುವುದರಿಂದ ಅಭಿವೃದ್ಧಿ ಕಾರ್ಯಕೈಗೊಳ್ಳಲು ಸಮಸ್ಯೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ನಗರದ ಮುಖ್ಯರಸ್ತೆಗಳಲ್ಲಿರುವ ಚರಂಡಿ ಅತಿಕ್ರಮಣ ಮಾಡಿರುವು ದನ್ನು ತೆರವುಗೊಳಿಸಿ ಅಭಿವೃದ್ಧಿಪಡಿ ಸುವಂತೆ ಕಳೆದ ಏಪ್ರಿಲ್‌ನಲ್ಲಿ ತಿಳಿಸಲಾ ಗಿತ್ತು. ಕಾಮಗಾರಿ ಯಾವ ಹಂತ ದಲ್ಲಿದೆ ಎಂದು ಗೋಯೆಲ್, ನಗರ ಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಪೌರಾಯುಕ್ತ ಬಿ.ಡಿ. ಬಸವ ರಾಜಪ್ಪ ಮತ್ತು ಎಇಇ ಆರ್.ಆರ್. ಪಾಟೀಲ ಸಮರ್ಪಕ ಉತ್ತರ ನೀಡದಿದ್ದಾಗ ಸಿಡಿಮಿಡಿಗೊಂಡ ಪ್ರಾದೇಶಿಕ ಆಯುಕ್ತರು “ಎಷ್ಟು ವರ್ತಕರಿಗೆ ನೋಟಿಸ್ ನೀಡಿದ್ದೀರಿ, ಯಾವಾಗ ನೀಡಿದ್ದೀರಿ” ಎಂದು ಪ್ರಶ್ನಿಸಿದರು. ನಗರಸಭೆ ಆಸ್ತಿಗೆ ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಸುವಂತೆ ನೋಟಿಸ್ ನೀಡ ಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬಳಿಕ ಮಹಾಬಲೇಶ್ವರ ಹಾಸಿನಾಳ ಲೇಔಟ್‌ನಲ್ಲಿರುವ ಉದ್ಯಾನವನಕ್ಕೆ ತೆರಳಿದರು. ಕಳಪೆ ಗುಣಮಟ್ಟದ ಫುಟ್‌ಪಾತ್ ವೀಕ್ಷಿಸಿ ಅಧಿಕಾರಿಗಳ ಮೇಲೆ ಕಿಡಿಕಾರಿ ದರು. ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.