ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಿಂದ ಮಂಡ್ಯಕ್ಕೆ ನಿತ್ಯ 250 ಆಕ್ಸಿಜನ್‌ ಸಿಲಿಂಡರ್‌

Last Updated 3 ಮೇ 2021, 7:16 IST
ಅಕ್ಷರ ಗಾತ್ರ

ಮಂಡ್ಯ: ಮೈಸೂರಿನಿಂದ ಜಿಲ್ಲೆಯ 6 ತಾಲ್ಲೂಕು ಆಸ್ಪತ್ರೆ, 10 ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ಗಳಿಗೆ ನಿತ್ಯ 250 ಆಮ್ಲಜನಕ ಸಿಲಿಂಡರ್‌ಗಳು ಸರಬರಾಜಾಗುತ್ತಿವೆ.

ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿ 13 ಕಿಲೋ ಲೀಟರ್‌ ಸಾಮರ್ಥ್ಯದ ದ್ರವರೂಪದ ಆಮ್ಲಜನಕ ಘಟಕವಿದೆ. ಇಲ್ಲಿಗೆ ಪ್ರತಿದಿನ 2 ದಿನಕ್ಕೊಮ್ಮೆ ಆಮ್ಲಜನಕ ಪೂರೈಕೆಯಾಗುತ್ತಿದೆ. ಖಾಸಗಿ ಏಜೆನ್ಸಿಯ ಮೂಲಕ ಬೆಂಗಳೂರಿನಿಂದ ಆಮ್ಲಜನಕ ಪೂರೈಕೆಯಾಗುತ್ತದೆ. ನಾಗಮಂಗಲ ತಾಲ್ಲೂಕು, ಬೆಳ್ಳೂರು ಕ್ರಾಸ್‌ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆ ಆವರಣದಲ್ಲಿ 2 ಕಿಲೋ ಲೀಟರ್‌ ಸಾಮರ್ಥ್ಯದ ದ್ರವರೂಪದ ಆಮ್ಲಜನಕ ಘಟಕವಿದೆ. ಇಲ್ಲಿ ಈಗಾಗಲೇ ಆಮ್ಲಜನಕ ಕೊರತೆ ಉಂಟಾಗಿದ್ದು ಆಮ್ಲಜನಕ ಅವಶ್ಯಕತೆಯುಳ್ಳ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತಿದೆ.

ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 30 ಆಕ್ಸಿಜನ್‌ ಹಾಸಿಗೆಗಳಿವೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಇಷ್ಟೇ ಸಾಮರ್ಥ್ಯವಿದೆ. ಆದರೆ ಸಿಎಚ್‌ಸಿಗಳಿಗೆ ಆಮ್ಲಜನಕ ಪೂರೈಕೆಯಾಗದ ಕಾರಣ ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿಲ್ಲ. ಹೆಚ್ಚುವರಿ ಸಿಲಿಂಡರ್‌ ಪೂರೈಕೆಗಾಗಿ ಮೈಸೂರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳು ಕೂಡ ಆಮ್ಲಜನಕಕ್ಕಾಗಿ ಮೈಸೂರು ನಗರವನ್ನೇ ಅವಲಂಬಿಸಿವೆ.
ಮಿಮ್ಸ್‌ ಆಸ್ಪತ್ರೆಯಲ್ಲಿ ಸದ್ಯ ಕೋವಿಡ್‌ಗಾಗಿ 300 ಹಾಸಿಗೆ ಮೀಸಲಿಡಲಾಗಿದೆ. ಹೆಚ್ಚುವರಿಯಾಗಿ 150 ಹಾಸಿಗೆಯ ವಾರ್ಡ್‌ ಸಿದ್ಧವಿದೆ. ಆದರೆ ಆಮ್ಲಜನಕ ಕೊರತೆಯಿಂದಾಗಿ ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿಲ್ಲ. ಇನ್ನೊಂದು ದ್ರವರೂಪದ ಆಮ್ಲಜನಕ ಘಟಕ ಮಂಜೂರಾತಿಗಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

‘ದಿನ ಬಿಟ್ಟು ದಿನ ಆಮ್ಲಜನರ ಬಾರದಿದ್ದರೆ ನಮ್ಮ ಎದೆ ಬಡಿತ ಹೆಚ್ಚಳವಾಗುತ್ತದೆ. ಮೊನ್ನೆ ಸಣ್ಣ ಟ್ಯಾಂಕರ್‌ ಮೂಲಕ ಆಮ್ಲಜನಕ ಬಂದಿತ್ತು. ಅಷ್ಟರಿಂದ ಒಂದು ದಿನ ಕೋವಿಡ್‌ ವಾರ್ಡ್‌ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ತಕ್ಷಣ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದೆವು, ಇನ್ನೊಂದು ಟ್ಯಾಂಕರ್‌ ತರಿಸಿಕೊಳ್ಳುವಲ್ಲಿ ಯಶಸ್ವಿಯಾದೆವು’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT