ಮಂಡ್ಯ: ‘ಈಗಿನ ರಾಜಕಾರಣಿಗಳು ಮೊದಲು ಎಂ.ಎಲ್.ಎ ಆಗಬೇಕು ಎನ್ನುತ್ತಾರೆ. ನಂತರ ಮಂತ್ರಿಯಾಗಬೇಕು, ಆಮೇಲೆ ಇಂತಹ ಖಾತೆಯೇ ಬೇಕೆಂದು ಪಟ್ಟು ಹಿಡಿಯುತ್ತಾರೆ. ಆದರೆ, ನಮ್ಮ ಮರಿಯಪ್ಪ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ‘ಹೋಂ ಲೆಸ್ ಮಿನಿಸ್ಟರ್’ (ಸ್ವಂತ ಮನೆಯೇ ಇಲ್ಲದ ಸಚಿವರು) ಆಗಿದ್ದರು ಎಂಬುದನ್ನು ನೋಡಿದಾಗ, ಇಂಥವರು ನಮ್ಮ ನಡುವೆ ಇದ್ದರೇ ಎಂದು ಆಶ್ಚರ್ಯವಾಗುತ್ತದೆ ಎಂದು ಮಾಜಿ ಸಚಿವ, ರಾಜ್ಯ ಖಾತರಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಶ್ಲಾಘಿಸಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಮೈಸೂರು ಚಲೋ ಅಥವಾ ಅರಮನೆ ಚಲೊ ಚಳವಳಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಟಿ.ಮರಿಯಪ್ಪ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾತ ಮುಖ್ಯಮಂತ್ರಿ, ಮಗ ಮುಖ್ಯಮಂತ್ರಿ, ಈಗ ಮೊಮ್ಮಗ ಶಾಸಕನಾಗಲು ವಿಧಾನಸಭೆ ಚುನಾವಣೆಗೆ ನಿಲ್ಲುವ ಪರಿಸ್ಥಿತಿಯಿದೆ ಎಂದು ಬಸವರಾಜ ಬೊಮ್ಮಾಯಿ ಕುಟುಂಬದ ಹೆಸರು ಹೇಳದೆ ಕುಟುಂಬ ರಾಜಕಾರಣದ ಬಗ್ಗೆ ರೇವಣ್ಣ ಹೇಳಿದರು. ಒಮ್ಮೆ ಮರಿಯಪ್ಪನವರ ಆರೋಗ್ಯ ಕೆಟ್ಟಾಗ ಮಹಾರಾಜರು ನಿಮಗೆ ನಿವೇಶನ ಕೊಡುತ್ತೇವೆ, ಮನೆ ಕಟ್ಟಿಕೊಳ್ಳಿ ಎಂದಾಗ ಬೇಡ ಎನ್ನುತ್ತಾರೆ. ಆದರೆ ಪ್ರಸ್ತುತದಲ್ಲಿ ನಿವೇಶನದ ಜಗಳವೇ ಸದ್ದು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ, ‘ಕೆ.ಎಸ್.ನರಸಿಂಹಸ್ವಾಮಿ, ಟಿ.ಮರಿಯಪ್ಪ ಅವರು ವಾಸವಿದ್ದ ಮನೆಯನ್ನು ಪಾರಂಪರಿಕ ಕಟ್ಟಡವನ್ನಾಗಿ ಮಾಡುವ ಮೂಲಕ ವಸ್ತು ಸಂಗ್ರಹಾಲಯವಾಗಿ ಮಾಡುವ ಬಗ್ಗೆ ಎನ್.ಎಸ್. ರಂಗರಾಜು ಅವರು ಉತ್ತಮ ಸಲಹೆ ನೀಡಿದ್ದಾರೆ. ಅದರಂತೆ ನಮ್ಮ ಜಿಲ್ಲಾಧಿಕಾರಿ ಕುಮಾರ ಅವರ ಗಮನಕ್ಕೆ ತಂದು ಎಲ್ಲರ ಸಹಕಾರದೊಂದಿಗೆ ಕಾರ್ಯಗತಗೊಳಿಸೋಣ. ಜೊತೆಗೆ ಮರೆಯಾಗುತ್ತಿರುವ ಮಹನೀಯರನ್ನು ಮತ್ತೆ ವೇದಿಕೆಗೆ ನೆನಪಿನ ಮೂಲಕ ತರೋಣ’ ಎಂದು ಹೇಳಿದರು.

‘ಮೈಸೂರು ಚಲೋ ಚಳವಳಿ ಐತಿಹಾಸಿಕ ಮಹತ್ವ’ ಕುರಿತು ನಿವೃತ್ತ ಪ್ರಾಧ್ಯಾಪಕ ಎನ್.ಎಸ್.ರಂಗರಾಜು ಮಾತನಾಡಿ, ‘ಪುರಾತತ್ವ ಇಲಾಖೆಯಲ್ಲಿ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಲು ಸಾಕಷ್ಟು ಹಣವಿದೆ. ಈಗಾಗಲೇ ಮೈಸೂರಿನಲ್ಲಿ ಆರ್.ಕೆ. ನಾರಾಯಣ್ ಮತ್ತು ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಲಾಗಿದೆ. ಅದರಂತೆ ಟಿ.ಮರಿಯಪ್ಪ ಅವರ ಮನೆಯನ್ನು ವಸ್ತು ಸಂಗ್ರಹಾಲಯ ಮಾಡಬೇಕು. ಮೈಸೂರು ಚಲೋ ಒಂದು ಅದ್ಭುತ ಚಳವಳಿ. ಮುಮ್ಮಡಿ ಅವರ ಕಾಲದಲ್ಲಿ ಸಾಗರ ದಂಗೆ ಕ್ರಾಂತಿ ನಡೆದ ನಂತರ ನಡೆದ ಮೈಸೂರು ಚಳವಳಿ ಅದ್ಭುತವಾದದ್ದು’ ಎಂದು ವಿವರಿಸಿದರು.

ಟಿ.ಮರಿಯಪ್ಪ ವ್ಯಕ್ತಿ-ವ್ಯಕ್ತಿತ್ವ ಹಾಗೂ ಸಾಧನೆ ಕುರಿತು ವಕೀಲ ನಾಗಮಂಗಲ ಜೀರಹಳ್ಳಿ ರಮೇಶಗೌಡ ವಿಷಯ ಮಂಡಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎಲ್. ಮಹಾದೇವ ಅಧ್ಯಕ್ಷತೆ ವಹಿಸಿದ್ದರು. ಟಿ.ಮರಿಯಪ್ಪ ಅವರ ಪುತ್ರ ಟಿ.ಎಂ.ರಾಜಕುಮಾರ, ಮಾಜಿ ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಆರ್ಟಿಒ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ, ಸಂಘದ ಕಾರ್ಯದರ್ಶಿ ಎಚ್.ಡಿ.ಸೋಮಶೇಖರ್, ಕೋಣನಹಳ್ಳಿ ಜಯರಾಂ, ಮಂಜುಳಾ ಉದಯಶಂಕರ್, ತಗ್ಗಹಳ್ಳಿ ವೆಂಕಟೇಶ್ ಭಾಗವಹಿಸಿದ್ದರು.

‘ಸಮುದಾಯದವರಿಗೆ ಬೆಲೆ ಕೊಡದ ಸಿಎಂ’

ಮಂಡ್ಯ: ‘ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿರುವ ವಿಧಾನಸೌಧ ಈಗ ‘ಮಾಲ್’ ಆಗಿ ಪರಿವರ್ತನೆಯಾಗಿದೆ. ಅನುಭವ ಇರುವ ವ್ಯಕ್ತಿಗಳ ಮಾತುಗಳನ್ನು ಕೇಳುವ ಕಿವಿಗಳು ಈಗ ಅಲ್ಲಿ ಸಿಗುವುದಿಲ್ಲ. ಜನಸೇವೆಗಿಂತ ಹಣ ಗಳಿಕೆಯೇ ಮುಖ್ಯವಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಮೈಸೂರು ಚಲೊ ಚಳವಳಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಟಿ.ಮರಿಯಪ್ಪ ನೆನಪಿನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮದೇ ಸಮುದಾಯದ ಕೊಲ್ಲೂರು ಮಲ್ಲಪ್ಪ ಟಿ.ಮರಿಯಪ್ಪನಂಥ ದಿಗ್ಗಜರ ಹೆಸರನ್ನು ಇಲ್ಲಿವರೆಗೂ ಹೇಳಿಲ್ಲ. ಇದರಿಂದ ಅವರ ಇಮೇಜ್ ಕಡಿಮೆಯಾಗುತ್ತದೆ ಎಂಬ ಭಾವನೆ ಇರಬಹುದು. ಇದು ನಮ್ಮ ಸಮುದಾಯಕ್ಕೆ ಕೊಡುವ ಬೆಲೆಯೇ? ಎಂದು ಪ್ರಶ್ನಿಸಿದರು.

‘ಸ್ವಾತಂತ್ರ್ಯ ಬಂದ ನಂತರದ ಕಾಲದಲ್ಲಿ ಸರ್ಕಾರವು ಭೂಮಿ ನೀಡಿ ಬೆಳೆ ಬೆಳೆಯುವಂತೆ ಜನರಿಗೆ ಹೇಳುತ್ತಿತ್ತು. ಈಗ ಎರಡು ರೂಪಾಯಿಗೆ ಅಕ್ಕಿ ತೆಗೆದುಕೊಳ್ಳಿ ಎಂದು ಜನರಿಗೆ ಹೇಳುತ್ತಿದ್ದಾರೆ. ಆಗಿನ ನಾಯಕತ್ವಕ್ಕೂ ಈಗಿನ ನಾಯಕತ್ವಕ್ಕೂ ಅಜಗಜಾಂತರವಿದೆ. ಮಂಡ್ಯ ಜಿಲ್ಲೆಯ ಕೆ.ವಿ.ಶಂಕರಗೌಡ ಸೇರಿದಂತೆ ಹಲವು ಮಹನೀಯರನ್ನು ನೋಡಿದರೆ ಕೈಮುಗಿಯಬೇಕು ಎನಿಸುತ್ತದೆ. ಆದರೆ ಈಗಿನ ಮಂತ್ರಿಗಳನ್ನು ನೋಡಿದರೆ ಉಗಿಯಬೇಕು ಎನ್ನಿಸುತ್ತದೆ’ ಎಂದರು.

‘ಸರ್ಕಾರಿ ಅಧಿಕಾರಿಗಳನ್ನು ಕಳ್ಳರು ಎಂದು ಹೇಳುವ ಸಂದರ್ಭದಲ್ಲಿ ನಾವಿದ್ದೇವೆ. ಆದರೆ ಎಲ್ಲ ಸರ್ಕಾರಿ ಅಧಿಕಾರಿಗಳು ಕಳ್ಳರಲ್ಲ ಎಂಬುದನ್ನು ತೋರಿಸಲು 25ಕ್ಕೂ ಹೆಚ್ಚು ನಿಷ್ಠಾವಂತ ಅಧಿಕಾರಿಗಳ ಬಗ್ಗೆ ಪುಸ್ತಕ ಬರೆಯುತ್ತಿರುವೆ’ ಎಂದು ತಿಳಿಸಿದರು.

‘ಮಂಡ್ಯ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ನಡೆಯುತ್ತಿದೆ. ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು ಸೌಜನ್ಯಕ್ಕಾದರೂ ಸಲಹೆ ಕೇಳಿಲ್ಲ. ಏಕೆಂದರೆ ಎಲ್ಲಿ ನಾನು ಪ್ರಶ್ನೆ ಮಾಡುತ್ತೇನೆಂಬ ಕಾರಣಕ್ಕೆ ಒಂದು ಸಭೆಗೂ ಕರೆದಿಲ್ಲ. ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ನನಗೆ ಮಾಹಿತಿಯೇ ಇಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.