ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳವಳ್ಳಿ: ಅಪರಿಚಿತೆ ಕೈಗೆ ನೀಡಿ ಮಗು ಕಳೆದುಕೊಂಡ ಮಹಿಳೆ

Published 9 ಜನವರಿ 2024, 14:25 IST
Last Updated 9 ಜನವರಿ 2024, 14:25 IST
ಅಕ್ಷರ ಗಾತ್ರ

ಮಳವಳ್ಳಿ: ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ತಾಯಿಯೊಬ್ಬರಿಂದ ಮಗು ಪಡೆದುಕೊಂಡ ಅಪರಿಚಿತ ಮಹಿಳೆ ಮಗುವಿನೊಂದಿಗೆ ಪರಾರಿಯಾಗಿದ್ದಾರೆ

ತಿ.ನರಸೀಪುರ ತಾಲ್ಲೂಕಿನ ವಡ್ಡರಕೊಪ್ಪಲಿನ ಶಿವಕುಮಾರ್ ಅವರ ಪತ್ನಿ ಸವಿತಾ ಅವರು ಮಗು ಕಳೆದುಕೊಂಡವರು. ಸೋಮವಾರ ಸಂಜೆ ತಿ.ನರಸೀಪುರಕ್ಕೆ ತೆರಳಲು ಚನ್ನಪಟ್ಟಣದ ಬಸ್ ನಿಲ್ದಾಣದಲ್ಲಿ ಮಗುವಿನೊಂದಿಗೆ ಬಸ್ ಹತ್ತಿದ್ದರು. ಈ ವೇಳೆ ಬಸ್‌ನಲ್ಲಿ ಜನಸಂದಣಿ ಹೆಚ್ಚಿತ್ತು. ಈ ವೇಳೆ ಸೀಟ್‌ನಲ್ಲಿ ಕೂತಿದ್ದ ಅಪರಿಚಿತ ಮಹಿಳೆ ಮಗು ಕೂರಿಸಿಕೊಳ್ಳಲು ಪಡೆದುಕೊಂಡಿದ್ದಾರೆ.

ಮಳವಳ್ಳಿ ಪಟ್ಟಣದ ನಿಲ್ದಾಣದಲ್ಲಿ ಬಸ್‌ನಿಂದ ಇಳಿಯುವ ಸವಿತಾ ಮುಂದಾದಾಗ ಆ ಅಪರಿಚಿತ ಮಹಿಳೆಯೂ ಸಹ ಇಳಿಯುವ ನಾಟಕವಾಡಿದ್ದು, ಕೆಲವೇ ಕ್ಷಣದಲ್ಲಿ ಅಲ್ಲಿಂದ ನಾಪತ್ತೆಯಾಗಿದ್ದಾರೆ. ಇದರಿಂದ ಆತಂಕಗೊಂಡ ಸವಿತಾ ಮಗು ಕಾಣದೇ ಕಣ್ಣೀರು ಹಾಕಿದ್ದಾರೆ. ಮಾಹಿತಿ ಪಡೆದ ಪಟ್ಟಣದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹುಡುಕಾಟ ನಡೆಸಿದ್ದಾರೆ.

ಯಾವುದೇ ಸುಳಿವು ಪತ್ತೆಯಾಗದ ಕಾರಣ ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣ ದಾಖಲಿಸಿದ್ದಾರೆ.

ಪತ್ತೆಗೆ ಮನವಿ: ಪ್ರಕರಣ ದಾಖಲಿಸಿದ ಪೊಲೀಸರು ಅಪರಿಚಿತ ಮಹಿಳೆ ಹಾಗೂ ಕಾಣೆಯಾದ ಮಗುವಿನ ಪತ್ತೆಗೆ  ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT