ಮಂಡ್ಯ: ಅಂಕೇಗೌಡ ಜ್ಞಾನ ಪ್ರತಿಷ್ಠಾನ ಪುಸ್ತಕ ಮನೆ ಗ್ರಂಥಾಲಯದ ಉಳಿವಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸಹಾಯಹಸ್ತ ನೀಡಲು ಮುಂದಾಗಬೇಕು ಎಂದು ಗ್ರಂಥಾಲಯದ ವ್ಯವಸ್ಥಾಪಕ ಟ್ರಸ್ಟಿ ಎಂ.ಅಂಕೇಗೌಡ ಮನವಿ ಮಾಡಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಂಥಾಲಯದಲ್ಲಿ 20 ಲಕ್ಷಕ್ಕೂ ಅಧಿಕ ಪುಸ್ತಕಗಳಿದ್ದು, ನಿರ್ವಹಣೆ ಸಾಧ್ಯವಾಗದೇ 8 ಲಕ್ಷ ಪುಸ್ತಕಗಳು ನೆಲದ ಮೇಲೆ ಬಿದ್ದು ನೀರಿನಲ್ಲಿ ತೋಯ್ದಿವೆ, ಗೆದ್ದಲು ಸಮಸ್ಯೆಯಿಂದಾಗಿ ಹಾಳಾಗುತ್ತಿವೆ. ಆದ್ದರಿಂದ ಗ್ರಂಥಾಲಯದ ಕಟ್ಟಡ ಹಾಗೂ ಪುಸ್ತಕಗಳ ಸಮಗ್ರ ವರ್ಗೀಕರಣದ ಅವಶ್ಯಕತೆಯಾಗಿ ಆರ್ಥಿಕ ನೆರವು ನೀಡಲು ಮನವಿ ಮಾಡಿದರು.

ಕಳೆದ 30 ವರ್ಷಗಳಿಂದ ಪುಸ್ತಕ ಮನೆಯನ್ನು ನಿರ್ವಹಿಸುತ್ತಾ ನಡೆಸುತ್ತಿದ್ದೇನೆ. ಗ್ರಂಥಾಲಯಕ್ಕೆ ರಾಜ್ಯೋತ್ಸವ ಪ್ರಶಸ್ತಿ, ಲಿಮ್ಕಾ ಬುಕ್ ಆಫ್ ರೆಕಾರ್ಡ್, ವರ್ಲ್ಡ್ ರೆಕಾರ್ಡ್, ಆಳ್ವಾಸ್ ನುಡಿ ಸಿರಿ ಪ್ರಶಸ್ತಿ, ಅಸಮಾನ್ಯ ಕನ್ನಡಿಗ ಪ್ರಶಸ್ತಿಗಳು ಲಭಿಸಿವೆ ಎಂದರು.

ಗ್ರಂಥಾಲಯಕ್ಕೆ ಹಲವು ಗಣ್ಯ ಮಾನ್ಯರು ಭೇಟಿ ನೀಡಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ನಾಗರತ್ನಮ್ಮ ಅಧ್ಯಕ್ಷತೆಯಲ್ಲಿ ಆಗಿನ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಗೌರವಿಸಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.