ಬುಧವಾರ, ಜನವರಿ 27, 2021
16 °C

ವರಲಕ್ಷ್ಮೀ ಗುಂಡೂರಾವ್ ಅಸ್ಥಿ ವಿಸರ್ಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ ಅವರ ಪತ್ನಿ ವರಲಕ್ಷ್ಮೀ ಗುಂಡೂರಾವ್‌ ಅವರ ಅಸ್ಥಿಯನ್ನು ಇಲ್ಲಿನ ಪಶ್ಚಿಮವಾಹಿನಿಯಲ್ಲಿ ಗುರುವಾರ ವಿಸರ್ಜಿಸಲಾಯಿತು.

ಗುಂಡೂರಾವ್‌ ಅವರ ಪುತ್ರ ದಿನೇಶ್‌ ಗುಂಡೂರಾವ್‌ ಅವರು ಕಾವೇರಿ ನದಿಯಲ್ಲಿ ತಾಯಿಯ ಅಸ್ಥಿ ವಿಸರ್ಜಿಸಿದರು.

ಬ್ರಾಹ್ಮಣ ಸಂಪ್ರದಾಯದ ವಿಧಿ, ವಿಧಾನದಂತೆ ಅಸ್ಥಿ ವಿಸರ್ಜನೆ ಕಾರ್ಯ ನಡೆಯಿತು. ಇದಕ್ಕೂ ಮುನ್ನ ನದಿಯ ಕಟ್ಟೆಯ ಮೇಲೆ ಅಸ್ಥಿ ಕುಡಿಕೆ ಇಟ್ಟು ಪೂಜೆ ಸಲ್ಲಿಸಿದರು. ಗುಂಡೂರಾವ್‌ ಅವರ ಮತ್ತೊಬ್ಬ ಪುತ್ರ ಮಹೇಶ್‌ ಗುಂಡೂರಾವ್‌ ಜತೆಗಿದ್ದರು.

ವೈದಿಕರಾದ ಶೇಷಾದ್ರಿ ಹಾಗೂ ತಂಡ ವಿಧಿ, ವಿಧಾನಗಳನ್ನು ನೆರವೇರಿಸಿತು. ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಪ್ರಕಾಶ್‌, ಕೆಪಿಸಿಸಿ ಸದಸ್ಯ ಎನ್‌.ಗಂಗಾಧರ್‌, ಮುಖಂಡರಾದ ಚಿದಂಬರ್‌, ಕೆ.ಗೋಪಾಲಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು