ಕಿಕ್ಕೇರಿ: ‘ಸನಾತನ ಕಾಲದಿಂದಲೂ ವಿಪ್ರರು ಅಖಂಡ ಪಾಂಡಿತ್ಯ ಹೊಂದಿದ್ದು ಪೂರ್ವಜರು ನೀಡಿದ ಕೊಡುಗೆಯನ್ನು ಮಕ್ಕಳು ಕಾಪಾಡಬೇಕು’ ಎಂದು ಕೇಂದ್ರಿಯ ವಿದ್ಯಾಲಯದ ನಿವೃತ್ತ ಸಹಾಯಕ ಅಧಿಕಾರಿ ಕೆ.ಎಲ್. ನಾಗರಾಜು ಹೇಳಿದರು.

ಇಲ್ಲಿನ ವಿಪ್ರ ಸೇವಾ ಸಮಿತಿ ಸುಬ್ಬರಾಯ ಛತ್ರದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಗದು ಪ್ರೋತ್ಸಾಹ ಧನನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು. ವಿಪ್ರ ವೃಂದದ ಮಕ್ಕಳಿಗೆ ಶಿಕ್ಷಣ ಶಕ್ತಿ. ಎಲ್ಲದರಲ್ಲೂ ಪೈಪೋಟಿ ಇದೆ. ಸಾಧನೆ ಸ್ವತ್ತಾಗಿಸಿಕೊಳ್ಳಿ ಎಂದು ಹುರಿದುಂಬಿಸಿದರು.

ಇಸ್ರೋ ನಿವೃತ್ತ ವಿಜ್ಞಾನಿ ಡಾ. ಎಸ್. ಸೀತಾ ಮಾತನಾಡಿದರು. ಸಮಾಜದ ಎಸ್ಸೆಸ್ಸೆಲ್ಸಿ ಇಂದ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಹಾಗೂ ಡಿಗ್ರಿ, ಮೆಡಿಕಲ್, ಇಂಜಿನಿಯರಿಂಗ್ ಮತ್ತಿತರ ಪದವಿ ವ್ಯಾಸಂಗದ ವಿವಿಧ ಜಿಲ್ಲೆಯ 38 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರಕ್ಕೆ ಸಹಕರಿಸಿದ ಇಂದಿರಾ ಭಾರ್ಗವ, ಗುರುಪ್ರಸಾದ್, ಕೆ. ಸತ್ಯನಾರಾಯಣ ಕೊಪ್ಪಲು, ಕೆ.ಎಸ್. ಚಂದ್ರಶೇಖರಯ್ಯ, ಶ್ರೀಮತಿ, ಎಚ್. ಕುಮಾರಸ್ವಾಮಿ, ಕೆ.ಆರ್. ಸತ್ಯನಾರಾಯಣ, ಕೆ.ಎಸ್. ಸುರೇಶ್, ಕೆ.ಎಸ್. ನಾರಾಯಣಸ್ವಾಮಿ, ಡಾ. ಮಧುಸೂಧನ್, ಕೆ.ಎನ್. ರಾಮಚಂದ್ರಭಟ್, ಪ್ರೊ. ಪ್ರಕಾಶ್ ನರಸಿಂಹ, ಕೃಷ್ಣಮೂರ್ತಿ ಅವರನ್ನು ಸ್ಮರಿಸಲಾಯಿತು.

ಕಿನ್ಯಾದ ನಿವೃತ್ತ ಹಿರಿಯ ಅಧಿಕಾರಿ ಕೆ.ಎಸ್. ಚಂದ್ರಶೇಖರಯ್ಯ, ನಿವೃತ್ತ ಅರಣ್ಯಾಧಿಕಾರಿ ಎಂ.ಎನ್. ಅನಂತಸ್ವಾಮಿ, ಕ್ಲಿಕ್ಸ್ ಕ್ಯಾಂಪಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಟಿ. ಅರಸು, ಕಿಕ್ಕೇರಿ ಸಮಿತಿಯ ಕೆ.ಬಿ. ವೆಂಕಟೇಶ್, ಮಹಬಲಶರ್ಮ, ಕೆ.ಎಸ್. ಪರಮೇಶ್ವರಯ್ಯ, ಗಣೇಶ್ರಾವ್, ಕೆ.ಎಸ್. ಅನಂತಸ್ವಾಮಿ, ಸುರಭಿಶರ್ಮ ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.