ಮೇಲುಕೋಟೆ: ಓದು ಬರಹದ ಜೊತೆಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ, ಮಕ್ಕಳು ಸರ್ವಾಂಗೀಣ ವಿಕಾಸ ಹೊಂದಲು ಸಾಧ್ಯ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ವೆಂಕಟರಾಮೇಗೌಡ ಹೇಳಿದರು.

ಇಲ್ಲಿನ ಗುರುಶೇನೆಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಾಲೆಗಳು ನಮ್ಮ ಕಲೆ-ಸಂಸ್ಕೃತಿ ಬೆಳೆಸುವ ಕೇಂದ್ರಗಳಾಗಿವೆ. ನಶಿಸಿಹೋಗುತ್ತಿರುವ ಕಲೆ ಸಂಸ್ಕೃತಿ ಉಳಿಸುವ ಜವಾಬ್ದಾರಿ ಶಾಲೆಗಳದ್ದಾಗಿದೆ. ಓದು ಬರಹದ ಜೊತೆಗೆ ಸೃಜನಶೀಲ ಅಭಿವ್ಯಕ್ತಿ ಬಹುಮುಖ್ಯವಾದುದು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಬೆಳೆದುಬರಲು ಇಂಥ ಸ್ಪರ್ಧೆಗಳು ಅವಶ್ಯವಾಗಿವೆ’ ಎಂದರು.

ಮೇಲುಕೋಟೆ ಸಂಸ್ಕೃತ ಸಂಶೋಧನ ಕೇಂದ್ರ ವಿದ್ವಾನ ಕುಮಾರ್ ಮಾತನಾಡಿ, ‘ಕಲೆ, ಸಾಹಿತ್ಯ, ಸಂಸ್ಕೃತಿ ಮನುಷ್ಯನ ಬೆಳವಣಿಗೆಗೆ ಸಹಾಯಕವಾಗಿವೆ. ಇವುಗಳ ಬಗ್ಗೆ ಅಭಿರುಚಿಯನ್ನು ಪ್ರಾಥಮಿಕ ಹಂತದಿಂದಲೇ ಮೂಡಿಸಬೇಕಾಗಿದೆ. ಮಕ್ಕಳಲ್ಲಿ ಸಹಜವಾಗಿ ವಿವಿಧ ಕಲೆಗಳು ಇದ್ದು, ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅವಶ್ಯ’ ಎಂದರು.

ಗ್ರಾ.ಪಂ. ಅಧ್ಯಕ್ಷೆ ಭವಾನಿ ಹರಿದರ್ ಮಾತನಾಡಿ, ‘ಅನೇಕ ಜನಪದ ಕಲಾ ಪ್ರಕಾರಗಳು ಇಂದು ಆಧುನಿಕತೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿವೆ. ಅವುಗಳ ಬಗ್ಗೆ ಮಕ್ಕಳಿಗೆ ತಿಳಿಸಿ, ಕಲಾಪ್ರದರ್ಶನ ಉತ್ತಮ ವೇದಿಕೆ ನಿರ್ಮಿಸಬೇಕಾಗಿದೆ’ ಎಂದು ಹೇಳಿದರು.

ಗ್ರಾ.ಪಂ. ಉಪಾಧ್ಯಕ್ಷರಾದ ಜಿ.ಕೆ. ಕುಮಾರ್, ಸಿಆರ್ ಪಿ ಬೆಟ್ಟಸ್ವಾಮಿಗೌಡ, ಇಸಿಒ ಜಯರಾಮು, ಪ್ರಾಶ ಸೌಮ್ಯಶ್ರೀ, ವೀರಭಧ್ರಸ್ವಾಮಿ, ನಿಂಗೇಗೌಡ್ರು, ಪಿಡಿಒ ರಾಜೇಶ್ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.