‘ಬಚ್ಪನ್ ಬಚಾವೋ’ ಆಂದೋಲನ ಸಂಸ್ಥೆಯ ರಾಜ್ಯ ಸಂಯೋಜಕ ವೇಣು ವರ್ಗಿಸ್ ಮಾತನಾಡಿ ‘ಬಾಲಕಾರ್ಮಿಕ ಪದ್ಧತಿಗೆ ಒಳಗಾದ ಯಾವುದೇ ಮಗುವಿಗೆ ಗಾಯಗಳು ಆಗಿದ್ದ ಸಂದರ್ಭದಲ್ಲಿ ಅಂಥ ಮಕ್ಕಳಿಗೆ ₹3 ಲಕ್ಷದವರೆಗೂ ಪರಿಹಾರವನ್ನು ನೀಡಬಹುದು. ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲು ವಿವಿಧ ಇಲಾಖೆಗಳು ಸಹಕಾರ ನೀಡಬೇಕು. ಬಾಲ ಕಾರ್ಮಿಕರನ್ನು ಪತ್ತೆಹಚ್ಚಲು ಹೋಗುವಾಗ ಸದರಿ ಅಧಿಕಾರಿಗಳಿಗೆ ವಾಹನದ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.