ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರು ಸೇರಿ 35 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 500 ದಾಟಿದ ಸೋಂಕಿತರ ಸಂಖ್ಯೆ, 12 ಮಂದಿಗೆ ಶೀತಜ್ವರದ ಸಮಸ್ಯೆ
Last Updated 4 ಜುಲೈ 2020, 15:51 IST
ಅಕ್ಷರ ಗಾತ್ರ

ಮಂಡ್ಯ: ಕೆ.ಆರ್‌.ಪೇಟೆ ಪುರಸಭೆಯ ಐವರು ಪೌರಕಾರ್ಮಿಕರು ಸೇರಿ ಶನಿವಾರ ಹೊಸದಾಗಿ 35 ಮಂದಿಯಲ್ಲಿ ಕೋವಿಡ್‌–19 ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 508ಕ್ಕೆ ಏರಿಕೆಯಾಗಿದೆ.

ಕೆ.ಆರ್‌.ಪೇಟೆ ಪುರಸಭೆಯ ನಾಲ್ವರು ಪೌರ ಕಾರ್ಮಿಕರು ಹಾಗೂ ಒಬ್ಬ ಚಾಲಕನಿಗೆ ರೋಗ ಪತ್ತೆಯಾಗಿದೆ. ಇದರಿಂದಾಗಿ ಪುರಸಭೆ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಇವರೆಲ್ಲರೂ ಕಂಟೈನ್‌ಮೆಂಟ್‌ ಬಡಾವಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಬೆಂಗಳೂರಿನಿಂದ ಜಿಲ್ಲೆಗೆ ಬಂದಿದ್ದ 6 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಅವರಲ್ಲಿ ಇಬ್ಬರು ಮಳವಳ್ಳಿ, ಮಂಡ್ಯ, ಮದ್ದೂರು, ಪಾಂಡವಪುರ, ನಾಗಮಂಗಲ ತಾಲ್ಲೂಕಿನ ತಲಾ ಒಬ್ಬರು ಇದ್ದಾರೆ. ಬೆಳಗಾವಿಯಿಂದ ಮಂಡ್ಯ ತಾಲ್ಲೂಕಿಗೆ ಬಂದಿದ್ದ ಒಬ್ಬರು, ಮೈಸೂರಿನಿಂದ ಪಾಂಡವಪುರಕ್ಕೆ ಬಂದಿದ್ದ ಒಬ್ಬರು, ಗೋವಾದಿಂದ ಪಾಂಡವಪುರ ತಾಲ್ಲೂಕಿಗೆ ಬಂದಿದ್ದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

ಮಹಾರಾಷ್ಟ್ರದಿಂದ ಬಂದಿದ್ದ ಇಬ್ಬರಲ್ಲಿ ಸೋಂಕು ಕಂಡುಬಂದಿದ್ದು ಒಬ್ಬರು ಕೆ.ಆರ್‌.ಪೇಟೆ, ಮತ್ತೊಬ್ಬರು ಪಾಂಡವಪುರ ತಾಲ್ಲೂಕಿಗೆ ಸೇರಿದ್ದಾರೆ. 10,142ನೇ ರೋಗಿಯ ಪ್ರಥಮ ಸಂಪರ್ಕಿತ, 15,254ನೇ ರೋಗಿಯ ಪ್ರಥಮ ಸಂಪರ್ಕಿತ, 11,012ನೇ ರೋಗಿಯ ಸಂಪರ್ಕಿತರಿಗೂ ರೋಗ ಪತ್ತೆಯಾಗಿದೆ.

12 ಮಂದಿ ಶೀತಜ್ಞರ (ಐಎಲ್‌ಐ) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ನಾಲ್ವರು ಪಾಂಡವಪುರ ತಾಲ್ಲೂಕು, ಮೂವರು ಮದ್ದೂರು ತಾಲ್ಲೂಕು, ಮೂವರು ಪಾಂಡವಪುರ, ಒಬ್ಬರು ಮಂಡ್ಯ, ಮತ್ತೊಬ್ಬರು ಕೆ.ಆರ್‌.ಪೇಟೆ ತಾಲ್ಲೂಕಿಗೆ ಸೇರಿದ್ದಾರೆ. 19,922 ಹಾಗೂ 19,924ನೇ ರೋಗಿಯ ಮೂಲ ಪತ್ತೆಹಚ್ಚಲಾಗುತ್ತಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೂ 18,646 ಮಂದಿಯ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. 508 ಸೋಂಕಿತರು ಕಂಡುಬಂದಿದ್ದು 355 ಮಂದಿ ಗುಣಮುಖರಾಗಿದ್ದಾರೆ. 155 ಪ್ರಕರಣಗಳು ಸಕ್ರಿಯವಾಗಿವೆ. ಹಾಸ್ಟೆಲ್‌ ಕ್ವಾರಂಟೈನಲ್ಲಿ 250 ಮಂದಿ ಇದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT