ಶುಕ್ರವಾರ, ಡಿಸೆಂಬರ್ 3, 2021
26 °C
ನಾಲ್ವರ ವಿರುದ್ಧ ದೂರು ದಾಖಲು

ದಲಿತ ಯುವಕನ ಕಟ್ಟಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ಹಸುವಿನ ಕಳವು ಆರೋಪ ಹೊರಿಸಿ ಪರಿಶಿಷ್ಟ ಸಮುದಾಯದ ಯುವಕನೊಬ್ಬನನ್ನು ಹಸುವಿಗೆ ಕಟ್ಟಿ ಹಲ್ಲೆ ಮಾಡಿ, ಮೆರವಣಿಗೆ ನಡೆಸಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ವೈರಲ್ ಆಗಿತ್ತು.

ತಾಲ್ಲೂಕಿನ ಹಣಕೊಳ ಗ್ರಾಮದ ಸುರೇಶ್ ವರ್ಧನ್ ಹಲ್ಲೆಗೊಳಗಾದ ಯುವಕ. ದುಗ್ಗನಹಳ್ಳಿಯ ರಾಜು, ಹಣಕೊಳ ಗ್ರಾಮದ ಸುಂದರಮ್ಮ, ಮಳವಳ್ಳಿಯ ಮಲ್ಲಯ್ಯ, ಗಿರೀಶ್‌ ವಿರುದ್ಧ ಗ್ರಾಮಾಂತರ ಪ್ರಕರಣ ದಾಖಲಾಗಿದೆ. 

ತಾಲ್ಲೂಕಿನ ದುಗ್ಗನಹಳ್ಳಿಯಲ್ಲಿ ವಾರದ ಹಿಂದೆ ಘಟನೆ ನಡೆದಿದೆ. ನಂತರ ಗ್ರಾಮದ ಮುಖಂಡರು ಸೇರಿ ರಾಜಿ ಸಂಧಾನ ಮಾಡಿದ್ದರು ಎನ್ನಲಾಗಿದೆ. ಆದರೆ, ಸೋಮವಾರ ವಿಡಿಯೊ ವೈರಲ್ ಆಗಿದ್ದು, ಹಲ್ಲೆಗೊಳಗಾದ ಯುವಕ ತನ್ನ ಸಮುದಾಯದ ಮುಖಂಡರೊಂದಿಗೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು