ಮಂಡ್ಯ: ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದು ನ್ಯಾಯಾಂಗ ಹಾಗೂ ಸಾರ್ವಭೌಮತೆಗೆ ಮಾಡಿದ ಅಪಮಾನವಾಗಿದೆ ಹಾಗಾಗಿ ವಕೀಲ ರಾಕೇಶ್ ಕಿಶೋರ್ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿ ಸಿಪಿಎಂ, ಸಿಐಟಿಯು, ಅಖಿಲ ಭಾತರ ವಕೀಲರ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.

ಬಿ.ಆರ್.ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದವನ ಮೇಲೆ ಈ ದೇಶದ ಕಾನೂನು ವ್ಯವಸ್ಥೆ ಏನೂ ಮಾಡಲಾಗಲ್ಲಿಲವೆಂಬ ಸಂದೇಶ ಸಮಾಜಕ್ಕೆ ಹೋದರೆ ಭಾರತ ಮತ್ತೆ ಬಹುಜನ ಭಾರತವಾಗಿ ಉಳಿಯುವುದು ಕಷ್ಟವಾಗಬಹುದು ಎಂದು ಆರೋಪಿಸಿದರು.

ಆರೋಪಿ ಮತ್ತು ಆತನ ಹಿಂದಿರುವ ಪಿತೂರಿಗಾರರ ಉದ್ದೇಶ ಈ ರೀತಿ ದೇಶ ಒಡೆಯುವುದೇ ಆಗಿದೆ ಎಂಬುದು ಆತನ ಕೃತ್ಯದಿಂದ ಮನದಟ್ಟಾಗಿದೆ ಎಂದರು.

ಸಿಪಿಐಎಂ ಟಿ.ಎಲ್.ಕೃಷ್ಣೇಗೌಡ, ಸಿಐಟಿಯು ಸಿ.ಕುಮಾರಿ, ಕರ್ನಾಟಕ ಜನಶಕ್ತಿ ಸಿದ್ದರಾಜು ಸಂಘಟನೆಯ ಬಿ.ಟಿ.ವಿಶ್ವನಾಥ್, ರೇವಣ್ಣ, ಕಿಶೋರ್ ಕೃಷ್ಣಯ್ಯ, ಪ್ರಕಾಶ್, ವೆಂಕಟೇಶ್, ಭಾರತ್ಪ್ರಿಯ, ಡಿ.ಆಕಾಶ್, ಪಲ್ಲವಿ, ಆನಂದ್, ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.