ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಡಯಾಗ್ನೋಸ್ಟಿಕ್‌ ಸೆಂಟರ್ ವಿರುದ್ಧ ಕ್ರಮಕ್ಕೆ ಆಗ್ರಹ

ಮಗುವಿನ ಪ್ರಾಣದ ಜೊತೆ ಚೆಲ್ಲಾಟ
Published 23 ನವೆಂಬರ್ 2023, 14:21 IST
Last Updated 23 ನವೆಂಬರ್ 2023, 14:21 IST
ಅಕ್ಷರ ಗಾತ್ರ

ಮಂಡ್ಯ: ‘ಮಗುವಿನ ಬಿಳಿರಕ್ತ ಕಣ ಸಂಖ್ಯೆ ಪರೀಕ್ಷೆಯ ವರದಿಯನ್ನು ತಪ್ಪಾಗಿ ನೀಡಿ ಲೋಪವೆಸಗಿರುವ ಮಂಡ್ಯ ಡಯಾಗ್ನೋಸ್ಟಿಕ್ ಸೆಂಟರ್ ವಿರುದ್ಧ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಮಗುವಿನ ತಂದೆ ಆದರ್ಶ್ ಒತ್ತಾಯಿಸಿದರು.

‘ನ.15 ರಂದು ನನ್ನ ಒಂದೂವರೆ ವರ್ಷದ ಮಗು ಮಾನ್‌ವೀರ್‌ಗೆ ಜ್ವರ ಕಾಣಿಸಿಕೊಂಡಿದ್ದರಿಂದ ಮಕ್ಕಳ ತಜ್ಞ ಡಾ.ಜಗದೀಶ್ ಅವರ ಸೂಚನೆಯ ಮೇರೆಗೆ ಮಂಡ್ಯ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಬಿಳಿರಕ್ತ ಕಣಗಳ ಸಂಖ್ಯೆಯ ಪರೀಕ್ಷೆಯನ್ನು ಮಾಡಿಸಿದ್ದೆವು, ಆ ವರದಿಯಲ್ಲಿ ಬಿಳಿರಕ್ತ ಕಣ ಸಂಖ್ಯೆ 32 ಸಾವಿರ  ಎಂದು ನಮೂದಿಸಿದ್ದರು. ಗಾಬರಿಗೊಂಡು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ಅಲ್ಲಿನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ಮಗುವಿನ ಬಿಳಿರಕ್ತ ಕಣಗಳ ಸಂಖ್ಯೆ 2,23,000 ಇರುವುದಾಗಿ ವರದಿ ಬಂದಿತ್ತು.  ಸೆಂಟರ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಒತ್ತಾಯಿಸಿದರು.

ಕುಟುಂಬದ ಸದಸ್ಯರಾದ ಯಶೋಧ, ರಾಣಿ, ಅನಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT