ಸಂತೇಬಾಚಹಳ್ಳಿ: ಇಲ್ಲಿನ ಜಾಗಿನಕೆರೆ ಗ್ರಾಮದಲ್ಲಿ ಲಯನ್ಸ್ ರೇಸಿಂಗ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಶ್ವಾನಗಳ ಓಟದ ಸ್ಪರ್ಧೆ ನಡೆಯಿತು.

ಸ್ಪರ್ಧೆ ಉದ್ಘಾಟಿಸಿ ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ‘ಜಾಗಿನಕೆರೆಯಲ್ಲಿ ಎರಡನೇ ವರ್ಷದ ಶ್ವಾನಗಳ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ. ಮುಧೋಳ ಶ್ವಾನ ಹೆಚ್ಚಿನ ಶಕ್ತಿಶಾಲಿಯಾಗಿದೆ. ಅವುಗಳನ್ನು ಓಟದ ಸ್ಪರ್ಧೆಗೆ ಕರೆತಂದು ಬಹುಮಾನ ಗೆಲ್ಲುತ್ತಿರುವುದು ಸಂತಸದ ವಿಚಾರ. ಎಲ್ಲ ಶ್ವಾನಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಯಾರಿಗೂ ತೊಂದರೆ ಆಗದಂತೆ ಸಾಕಬೇಕು’ ಎಂದರು.

ಮೊದಲ ಬಹುಮಾನ ₹15 ಸಾವಿರ, ದ್ವಿತೀಯ ಬಹುಮಾನ ₹7 ಸಾವಿರ (ಉದ್ಯಮಿ ಮಂಜುನಾಥ್), ತೃತೀಯ ಬಹುಮಾನ ₹3.5 ಸಾವಿರ (ದರ್ಶನ್), ಸ್ನೇಹಜೀವಿ ರೇಸಿಂಗ್ ಕ್ಲಬ್ ವತಿಯಿಂದ ನಾಲ್ಕನೇ ಬಹುಮಾನ ₹2 ಸಾವಿರ, ಐದನೇ ಬಹುಮಾನ ಹೇಮಂತ್ ವಿತರಣೆ ಮಾಡಿದರು.

ಮಂಜುನಾಥ್, ಮನ್ಮುಲ್ ನಿರ್ದೇಶಕ ಎಂ.ಬಿ. ಹರೀಶ್, ಜಾಗಿನಕೆರೆ ಅಂಬರೀಷ್, ಕೈಗೊನಹಳ್ಳಿ ಜಯರಾಮ್, ಡೈರಿ ಅಶೋಕ್, ರೇಸಿಂಗ್ ಆಯೋಜಕ ದೀಪು, ರಾಜೇಗೌಡ, ವಿನಾಯಕ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಶ್ವಾನ ಪ್ರಿಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.